ಕಾಶ್ಮೀರ ಕಣಿವೆಯಲ್ಲಿ ಏಕ್​ಲವ್​ಯಾ ಚಿತ್ರೀಕರಣ

122017762_384081109448740_8607529633461069135_n
Published on

ಬೆಂಗಳೂರು: ಪ್ರೇಮ್​ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ‘ಏಕ್​ಲವ್​ ಯಾ’ ಸಿನಿಮಾ ಈಗಾಗಲೇ ಪೋಸ್ಟರ್ ಮತ್ತು ಹಾಡಿನ ಸಣ್ಣ ಝಲಕ್​ ಮೂಲಕವೇ ಸದ್ದು ಮಾಡುತ್ತಿದೆ. ಲಾಕ್​ಡೌನ್ ಬಳಿಕ ಶೂಟಿಂಗ್​ ಕೆಲಸವೂ ಬಿರುಸಿನಿಂದ ನಡೆಯುತ್ತಿದ್ದು, ಇದೀಗ ಪ್ರೇಮ್​ ಆ್ಯಂಡ್​ ಗ್ಯಾಂಗ್​ ನೇರವಾಗಿ ಕಾಶ್ಮೀರ ಕಣಿವೆಯಲ್ಲಿ ಬಿಡಾರ ಹೂಡಿದೆ.

ಒಂದಷ್ಟು ವಿಶೇಷತೆಗಳೊಂದಿಗೆ ತಂಡ ಕಾಶ್ಮೀರದಲ್ಲಿ ಶೂಟಿಂಗ್​ಗೆ ತೆರಳಿದೆ. ಏನದು ವಿಶೇಷತೆ ಎಂಬುದನ್ನು ಸ್ವತಃ ಪ್ರೇಮ್​ ಹೇಳಿಕೊಂಡಿದ್ದಾರೆ. ಆರ್ಟಿಕಲ್​ 370 ಜಾರಿ ಬಳಿಕ ಕನ್ನಡದ ಮೊದಲ ಸಿನಿಮಾ ಕಾಶ್ಮೀರದಲ್ಲಿ ಚಿತ್ರೀಕರಣವಾಗಲಿದೆ. ಈಗಾಗಲೇ ತಂಡದವರೆಲ್ಲ ಕಾಶ್ಮೀರಕ್ಕೆ ಬಂದಿಳಿದಿದ್ದೇವೆ’ ಎಂದು ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಮಾಡಿ ಶೇರ್​ ಮಾಡಿದ್ದಾರೆ.

ಅಂದಹಾಗೆ, ಸದ್ಯ ಕಾಶ್ಮೀರದಲ್ಲಿ ಹಾಡಿನ ಚಿತ್ರೀಕರಣ ಮಾಡಿಕೊಳ್ಳಲು ತಂಡ ಲೊಕೇಷನ್​ ಗುರುತು ಮಾಡಿದ್ದು, ಅದಾದ ಬಳಿಕ ಅಲ್ಲಿಂದ ಗುಜರಾತ್​ನಲ್ಲಿಯೂ ಒಂದಷ್ಟು ಭಾಗದ ಶೂಟಿಂಗ್​ ಆಗಲಿದೆ. ಇತ್ತೀಚೆಗಷ್ಟೇ ಗುಜರಾತ್​ನ ಕಚ್​ಗೆ ಭೇಟಿ ನೀಡಿ, ಎಮ್ಮೆ ಮತ್ತದರ ಕರುವನ್ನು ಖರೀದಿಸಿ ತಂದಿದ್ದರು. ತಾಯಿ ಎಮ್ಮೆಗೆ ಮಂಡೋದರಿ, ಕರುವಿಗೆ ಭೈರವಿ ಎಂಬ ನಾಮಕರಣವನ್ನೂ ಮಾಡಿದ್ದಾರವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net