

ಬೆಂಗಳೂರು: ಆಫ್ ಸ್ಕ್ರೀನ್ ದಂಪತಿ ದಿಗಂತ್ ಮತ್ತು ಐಂದ್ರಿತಾ ಇದೀಗ ಸುದೀರ್ಘ ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. 2012ರಲ್ಲಿ ತೆರೆಗೆ ಬಂದಿದ್ದ ಪಾರಿಜಾತ ಚಿತ್ರದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಅದಾದ ಬಳಿಕ ಚೌಕ ಸಿನಿಮಾದಲ್ಲಿ ನಟಿಸಿದ್ದರೂ, ಇಬ್ಬರು ಮುಖಾಮುಖಿ ಆಗಿರಲಿಲ್ಲ. ಇದೀಗ 8 ವರ್ಷಗಳ ಬಳಿಕ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದ ಮೂಲಕ ಆಗಮಿಸುತ್ತಿದ್ದಾರೆ.
ಹೌದು, ಈಗಾಗಲೇ ಶಿವಮೊಗ್ಗ, ಸಾಗರ, ನಿಟ್ಟೂರಿನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಿದೆ. ಈ ಚಿತ್ರದ ಶೂಟಿಂಗ್ನಲ್ಲಿ ದಿಗಂತ್ ಮತ್ತು ಐಂದ್ರಿತಾ ಸಹ ಭಾಗವಹಿಸಿದ್ದಾರೆ. ಇಬ್ಬರು ಒಟ್ಟಾಗಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ಐಂದ್ರಿತಾ, ‘ಎಂಟು ವರ್ಷದ ಬಳಿಕ ಮತ್ತೆ ನನ್ನ ಆಫ್ ಸ್ಕ್ರೀನ್ ಲವ್ ಜತೆ ತೆರೆಹಂಚಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.
ಇದನ್ನೂ ಓದಿ: ಎಂ.ಜಿ.ಶ್ರೀನಿವಾಸ್-ರಂಜನಿ ರಾಘವನ್ ‘ವೆಟರನ್’
ಐಂದ್ರಿತಾ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್, ‘ಸೂಪರ್.. ನಿಮ್ಮನ್ನು ಮತ್ತೆ ಒಟ್ಟಿಗೆ ತೆರೆ ಮೇಲೆ ನೋಡುವುದೇ ಚೆಂದ. ಒಳ್ಳೆಯದಾಗಲಿ. ಖುಷಿ ನಿಮ್ಮದಾಗಲಿ’ ಎಂದು ಸುದೀಪ್ ಸಹ ಶುಭ ಹಾರೈಸಿದ್ದಾರೆ. ವಿನಾಯಕ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ರಂಜನಿ ರಾಘವನ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.