ಉಳಿದವರು ಅಪ್ಪು ಅವರಿಗೆ ಹಲವು ರೀತಿಗಳಲ್ಲಿ ವಿಶೇಷ ಗೌರವ ಸಲ್ಲಿಸುತ್ತಿದ್ದಾರೆ. ಅಲ್ಲದೆ ಅನೇಕ ಅಭಿಮಾನಿಗಳು ಅಪ್ಪು ಅವರ 3 ಡಿ ಪ್ರತಿಮೆಗಳನ್ನು ತಯಾರಿಸುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ಏರಿಯಾಗಳಿಗೆ, ರಸ್ತೆಗಳಿಗೆ, ವೃತ್ತಗಳಿಗೆ ಅಪ್ಪು ಅವರ ಹೆಸರನ್ನು ನಾಮಕರಣ ಮಾಡುತ್ತಿದ್ದಾರೆ. ಇದೇ ರೀತಿ, ಬೆಂಗಳೂರಿನ ರಾಜಾಜಿನಗರದ 6ನೇ ಬ್ಲಾಕ್ನಲ್ಲಿ ಅಪ್ಪು ಅವರ ಒಂದು ಪ್ರತಿಮೆಯನ್ನು ಇರಿಸಲಾಗಿದೆ. ಆದರೆ, ಈ ಪ್ರತಿಮೆ ಬೇರೆ ಪ್ರತಿಮೆಗಳಂತೆ ಅಲ್ಲ. ಕಾರಣ, ಅಭಿಮಾನಿಗಳ ದೇವರಾದ ಅಪ್ಪು ಅವರ ಪ್ರತಿಮೆ ಇದೇ ಮೊದಲ ಬಾರಿಗೆ ಅವರ ತಂದೆ ಅಣ್ಣಾವ್ರ ಪ್ರತಿಮೆಯ ಜತೆಗೆ ಒಟ್ಟಿಗೆ ಇರಿಸಲಾಗಿದೆ.