ಭಾರತದಲ್ಲಿ ಹಿಂದಿ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’ ಸೃಷ್ಟಿಸಿರುವ ಕ್ರೇಜ್, ಮುರಿದಿರುವ ದಾಖಲೆಗಳು ಅಷ್ಟಿಷ್ಟಲ್ಲ. ಹೌದು, ಗಲ್ಲಾಪೆಟ್ಟಿಗೆಯನ್ನು ಉಕ್ಕಿ ಹರಿಯುವಂತೆ ಮಾಡುತ್ತಿರುವ ಈ ಸಿನಿಮಾ ಇಲ್ಲಿಯವರೆಗೆ ಬರೋಬ್ಬರಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಇಡೀ ದೇಶದ ಹಾಗೂ ವಿದೇಶಗಳಲ್ಲಿನ ಸಿನಿಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಹೀಗಿದ್ದರೂ, ಈ ಸಿನಿಮಾದಲ್ಲಿ ತೋರಿಸಲಾದ ಹಲವು ವಿಷಯಗಳ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಕಾಶ್ಮೀರ್ ಪಂಡಿತರ ಹತ್ಯೆ, ವಲಸೆಯ ಬಗ್ಗೆ ಕಥೆ ಹೊಂದಿರುವ ಈ ಸಿನಿಮಾ ಬಹುತೇಕ ಎಲ್ಲಾ ಬಿಜೆಪಿ ರಾಜಕಾರಣಿಗಳ ಹಾಗೂ ಹಿಂದೂಗಳ ಮನಗೆದ್ದಿದೆ.