ಪುಷ್ಪ ಚಿತ್ರದ ಪ್ರೊಡಕ್ಷನ್ ವರ್ಕರ್ಸ್​ಗೆ ತಲಾ 1 ಲಕ್ಷ ಬಹುಮಾನ: ಸುಕುಮಾರ್ ಭಾವುಕ

Published on
ಹೈದರಾಬಾದ್: ನಿರ್ದೇಶಕ ಸುಕುಮಾರ್ ಅವರ 'ಪುಷ್ಪ: ದಿ ರೈಸ್' ಚಿತ್ರದ ಶೂಟಿಂಗ್​ ಸಮಯದಲ್ಲಿ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆಯ ಸಂಕೇತವಾಗಿ ಸಿನಿಮಾ ಪ್ರೊಡಕ್ಷನ್ ವರ್ಕರ್ಸ್​ಗೆ ತಲಾ 1 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ. "ನನ್ನ ಸಿನಿಮಾದ ಪ್ರೊಡಕ್ಷನ್ ವರ್ಕರ್ಸ್​ಗಳ ನಿರಂತರ ಬೆಂಬಲವನ್ನು ಶ್ಲಾಘಿಸಬೇಕಾಗಿದೆ. ಪ್ರೊಡಕ್ಷನ್ ಬಾಯ್‌ಗಳು, ಕ್ಯಾಮೆರಾಮೆನ್, ಲೈಟ್ ಮ್ಯಾನ್‌ಗಳು ಮತ್ತು ಇತರರು 'ಪುಷ್ಪ'ಗಾಗಿ ಹಗಲಿರುಳು ಒಟ್ಟಿಗೆ ಕೆಲಸ ಮಾಡಿದ್ದಾರೆ. ಹಾಗಾಗಿ, ಮೆಚ್ಚುಗೆಯ ಸಂಕೇತವಾಗಿ ನಾನು ಅವರಿಗೆ ಉಡುಗೊರೆಯನ್ನು ನೀಡಲು ಬಯಸುತ್ತೇನೆ. ಪ್ರೊಡಕ್ಷನ್ ವರ್ಕರ್ಸ್​ಗಳಿಗೆ ತಲಾ 1 ಲಕ್ಷ ರೂ. ನೀಡಲಿದ್ದೇನೆ'' ಎಂದು ಸುಕುಮಾರ್ ಘೋಷಿಸಿದರು. 
ಇನ್ನು, 'ಪುಷ್ಪ' ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಅಚಲವಾದ ಬೆಂಬಲ ನೀಡಿದ ಎಲ್ಲಾ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಧನ್ಯವಾದ ಹೇಳಿದರು ಸುಕುಮಾರ್. ಜೊತೆಗೆ, ತಮ್ಮ ಕೃತಜ್ಞತಾ ಭಾಷಣದಲ್ಲಿ ಸಾಕಷ್ಟು ಭಾವುಕರಾಗಿದ್ದರು. ಸಿನಿಮಾಗೆ ಅದ್ಧೂರಿ ಯಶಸ್ಸು ಲಭಿಸಿರುವುದರಿಂದ ಚಿತ್ರತಂಡ ಯಶಸ್ಸಿನ ಸಂಭ್ರಮಾಚರಣೆಗಾಗಿ ಇತ್ತೀಚೆಗೆ 'ಥ್ಯಾಂಕ್ಯೂ ಮೀಟ್' ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾತಾಡಿದ ನಟರು, ಸುಕುಮಾರ್ ಮತ್ತು ಬಹುತೇಕ ಎಲ್ಲರೂ ಭಾವುಕರಾಗಿದ್ದರು. ಸುಕುಮಾರ್ ಅವರು ಮಾತಾಡಿರುವ ವಿಡಿಯೋ ತುಣುಕುವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net