ನನ್ನ ಫಾಲೋ ಮಾಡಿದ್ರೆ ಚೆನ್ನಾಗಿರಲ್ಲ ... ದೀಪಿಕಾ ಬೆದರಿಕೆ ಹಾಕಿದ್ದು ಯಾರಿಗೆ?

Deepika Padukone - Final
Published on

ಮುಂಬೈ: ಹಾಲಿವುಡ್​ ಮತ್ತು ಬಾಲಿವುಡ್​ನಲ್ಲಿ ಅಲ್ಲಿನ ಸೆಲೆಬ್ರಿಟಿಗಳನ್ನು ಪಾಪರಾಜ್ಜಿಗಳು ಫಾಲೋ ಮಾಡಿ, ಫೋಟೋಗಳನ್ನು ಕ್ಲಿಕ್ಕಿಸುವ ಪರಿಪಾಠ ಗೊತ್ತೇ ಇದೆ. ಎಷ್ಟೋ ಬಾರಿ, ಇದೆಲ್ಲದರಿಂದ ಕಿರಿಕಿರಿಗೊಳ್ಳುವ ಸೆಲೆಬ್ರಿಟಿಗಳು, ಪಾಪರಾಜಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವುದೂ ಇದೆ.

ಈಗ್ಯಾಕೆ ಈ ವಿಷಯ ಎಂದರೆ, ಇತ್ತೀಚೆಗೆ ದೀಪಿಕಾ ಪಡುಕೋಣೆಯವರನ್ನು ಪಾಪರಾಜಿಗಳ ಕಾಟಕ್ಕೆ ತುತ್ತಾಗಿ, ಅವರಿಗೆ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ. ಒಂದು ಪಕ್ಷ ಇದೇ ರೀತಿ ಎಲ್ಲೆಂದರಲ್ಲಿ ಫಾಲೋ ಮಾಡಿದರೆ, ಪಾಪರಾಜಿಗಳ ಮೇಲೆ ಲೀಗಲ್​ ಆಕ್ಷನ್​ ತೆಗೆದುಕೊಳ್ಳುವುದಾಗಿ ಅವರು ಹೆದರಿಸಿದ್ದಾರೆ.

ಇತ್ತೀಚೆಗೆ, ದೀಪಿಕಾ ಪಡುಕೋಣೆ ಮತ್ತು ಅನನ್ಯ ಪಾಂಡೆ ಇಬ್ಬರೂ ಮುಂಬೈನ ಖಾರ್​ನಲ್ಲಿರುವ ಧರ್ಮ ಪ್ರೊಡಕ್ಷನ್ಸ್​ನ ಆಫೀಸಿಗೆ ಹೋಗಿದ್ದರಂತೆ. ಈ ಸಂದರ್ಭದಲ್ಲಿ ಪಾಪರಾಜಿಗಳು ಎದುರಾಗಿ ಇಬ್ಬರ ಫೋಟೋಗಳನ್ನು ತೆಗೆದಿದ್ದಾರೆ. ಇಬ್ಬರೂ ತಾಳ್ಮೆಯಿಂದ ಫೋಟೋ ತೆಗೆಸಿಕೊಂಡು ತಮ್ತಮ್ಮ ಮನೆಗಳತ್ತ ಹೊರಟಿದ್ದಾರೆ.

ಆದರೆ, ಅಷ್ಟಕ್ಕೆ ತೃಪ್ತಿಯಾಗದ ಕೆಲವು ಪಾಪರಾಜಿಗಳು ದೀಪಿಕಾ ಅವರ ಕಾರನ್ನು ಹಿಂಬಾಲಿಸಿದ್ದಾರೆ. ದೀಪಿಕಾರ ಇನ್ನಷ್ಟು ಫೋಟೋಗಳನ್ನು ತೆಗೆಯುವುದಕ್ಕೆ ಮುಂದಾಗಿದ್ದಾರೆ. ಇದನ್ನು ಗಮನಿಸಿದ ದೀಪಿಕಾ ತಮ್ಮ ಕಾರಿನಿಂದ ಇಳಿದು, ಹಾಗೆಲ್ಲಾ ಹಿಂಬಾಲಿಸಬಾರದು ಎಂದು ತಿಳಿಹೇಳಿದರಂತೆ. ಆದರೆ, ಯಾವಾಗ ಪಾಪರಾಜಿಗಳು ಮಾತಿಗೆ ಮಾತು ಬೆಳೆಸಿದರೋ, ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡರಂತೆ ದೀಪಿಕಾ. ಇದೇ ರೀತಿ ಹೋದಲ್ಲಿ ಬಂದಲ್ಲಿ ಫಾಲೋ ಮಾಡಿದರೆ, ಇನ್ನು ಮುಂದೆ ಪಾಪರಾಜಿಗಳ ವಿರುದ್ಧ ನ್ಯಾಯಯುತ ಹೋರಾಟ ಮಾಡುವುದಾಗಿ ಅವರು ಬೆದರಿಕೆ ಹಾಕಿದರಂತೆ.

ದೀಪಿಕಾ ನಿಜಕ್ಕೂ ಪಾಪರಾಜಿಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರುತ್ತಾರಾ? ಕಾದು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net