

ಪಣಜಿ: ಗೋವಾದ ಬೀಚ್ನಲ್ಲಿ ಅರೆನಗ್ನ ನೃತ್ಯ ಮಾಡಿದ ಹಿನ್ನೆಲೆಯಲ್ಲಿ ಮಾಡೆಲ್ ಪೂನಂ ಪಾಂಡೆ ವಿರುದ್ಧ ಇತ್ತೀಚೆಗಷ್ಟೇ ದೂರು ದಾಖಲಾಗಿ, ಬಳಿಕ ಜಾಮೀನನ ಮೇಲೆ ಬಿಡುಗಡೆ ಆಗಿದ್ದರು. ಬಳಿಕ ಬೀಚ್ನಲ್ಲಿ ಬೆತ್ತಲೆ ಓಡಾಡಿ ಜನ್ಮದಿನ ಆಚರಿಸಿಕೊಂಡಿದ್ದ ಮಿಲಿಂದ್ ಸೋಮನ್ಗೂ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದರು. ಅದರಂತೆ ಮಿಲಿಂದ್ ವಿರುದ್ಧವೂ ದೂರು ದಾಖಲಾಗಿತ್ತು. ಇದೀಗ ಹಾಗೇ ಓಡಾಡಿದ್ದರಲ್ಲಿ ತಪ್ಪೇನಿದೆ ಎಂದು ಬಾಲಿವುಡ್ ನಟಿ ಪೂಜಾ ಬೇಡಿ ಮಿಲಿಂದ್ ಪರವಾಗಿ ಮಾತನಾಡಿದ್ದಾರೆ.
ಮಿಲಿಂದ್ ಬೆತ್ತಲೆಯಾಗಿ ಓಡಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಪೂನಂಗೆ ಒಂದು ನ್ಯಾಯ, ಮಿಲಿಂದ್ಗೆ ಬಂದು ನ್ಯಾಯವಾ.. ಮಿಲಿಂದ್ ಮೇಲೂ ಕೇಸ್ ದಾಖಲಿಸಿ ಎಂದು ಸಾಕಷ್ಟು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಗೋವಾದ ಸುರಕ್ಷಾ ಮಂಚ್ ಈ ಸಂಬಂಧ ದೂರು ನೀಡಿತ್ತು. ದೂರು ಪರಿಗಣಿಸಿ ಮಿಲಿಂದ್ ಸೋಮನ್ ವಿರುದ್ಧ ಐಪಿಸಿ ಸೆಕ್ಷನ್ 294 ಮತ್ತು 67ರ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ ಪ್ರದರ್ಶನ ಮಾಡಿದ್ದಾರೆಂದು ಎಫ್ಐಆರ್ ದಾಖಲಿಸಲಾಗಿತ್ತು.
ಇದೀಗ ಮಿಲಿಂದ್ ಪರವಾಗಿ ನಿಂತಿರುವ ನಟಿ ಮತ್ತು ಮಾಡೆಲ್ ಪೂಜಾ ಬೇಡಿ, ’ಹಾಗೇ ಹಂಚಿಕೊಂಡಿರುವ ಚಿತ್ರದಲ್ಲಿ ಯಾವುದೇ ತಪ್ಪಿಲ್ಲ. ಇದು ನೋಡುಗರ ದೃಷ್ಟಿಕೋನದ ಮೇಲೆ ಬಿಟ್ಟ ವಿಚಾರ. ಆತನ ಫಿಸಿಕ್ ಚೆನ್ನಾಗಿದೆ. ಒಂದು ವೇಳೆ ಹಾಗೇ ಬೆತ್ತಲೆಯಾಗಿ ಓಡಾಡುವುದು ತಪ್ಪೇ ಎಂದರೆ, ಎಲ್ಲ ನಾಗಾಸಾಧುಗಳೂ ಇಷ್ಟೊತ್ತಿಗೆ ಜೈಲಿನಲ್ಲಿರಬೇಕಿತ್ತು’ ಎಂದು ಹೇಳಿಕೊಂಡಿದ್ದಾರೆ.
55ನೇ ಜನ್ಮದಿನದ ಹಿನ್ನೆಲೆಯಲ್ಲಿ ಗೋವಾದ ಬೀಚ್ನಲ್ಲಿ ಬೆತ್ತಲೆಯಾಗಿ ಓಡಾಡಿದ ಫೋಟೋವನ್ನು ಮಿಲಿಂದ್ ಶೇರ್ ಮಾಡಿದ್ದರು. ಆ ಫೋಟೋಕ್ಕೆ ಪತ್ನಿ ಫೋಟೋ ಕ್ರೆಡಿಟ್ ಎಂದೂ ಬರೆದುಕೊಂಡಿದ್ದರು. ಮುಜುಗರಕ್ಕೀಡು ಮಾಡುವ ಫೋಟೋ ಶೇರ್ ಮಾಡಿಕೊಂಡು ನೆಟ್ಟಿಗರಿಂದ ಅಪಮಾನಕ್ಕೀಡಾಗಿದ್ದರು. (ಏಜೆನ್ಸೀಸ್)