‘ಪುಷ್ಪ’ ಶೂಟಿಂಗ್​ ಶುರು; ರಾಜಮಂಡ್ರಿಯತ್ತ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ

g1ea9jnohdadxgt3_1604915850
Published on

ಹೈದರಾಬಾದ್: ಪೋಸ್ಟರ್ ಮೂಲಕ ಸಾಕಷ್ಟು ಕುತೂಹಲ ಕೆರಳಿಸಿರುವ ಅಲ್ಲು ಅರ್ಜುನ್​ ನಾಯಕನಾಗಿ ನಟಿಸುತ್ತಿರುವ ಪುಷ್ಪ ಚಿತ್ರ ಇದೀಗ ಸುದ್ದಿಯಲ್ಲಿದೆ. ಕಳೆದ ಒಂಬತ್ತು ತಿಂಗಳಿಂದ ಕರೊನಾ ಹಿನ್ನೆಲೆಯಲ್ಲಿ ಶೂಟಿಂಗ್​ ಬದಿಗಿಟ್ಟಿದ್ದ ಇಡೀ ತಂಡ ಮತ್ತೆ ಸೆಟ್​ನತ್ತ ಮುಖಮಾಡಿದೆ. ನಾಳೆಯಿಂದ ಚಿತ್ರದ ಚಿತ್ರೀರಕಣಕ್ಕೆ ನಿರ್ದೇಶಕ ಸುಕುಮಾರ್ ಚಾಲನೆ ನೀಡಲಿದ್ದಾರೆ.

ಇಲ್ಲಿಯವರೆಗೂ ಕೇವಲ ಶೇ. 10ರಷ್ಟು ಭಾಗದ ಚಿತ್ರೀಕರಣ ಮಾಡಿಕೊಂಡಿರುವ ನಿರ್ದೇಶಕರು, ಇದೀಗ ಬಿರುಸಿನ ಶೂಟಿಂಗ್​ಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅದರಂತೆ, ನ. 10ರಿಂದ ರಾಜಮಂಡ್ರಿಯ ದಟ್ಟ ಕಾಡಿನಲ್ಲಿ ಚಿತ್ರೀಕರಣಕ್ಕೆ ಪ್ಲ್ಯಾನ್​ ಮಾಡಿಕೊಂಡಿದೆ ತಂಡ.

ಅಲ್ಲು ಅರ್ಜುನ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಅವರ ಪಾತ್ರ ಮತ್ತು ಪೋಷಾಕು ಹೇಗಿರಲಿದೆ ಎಂಬ ಬಗ್ಗೆ ಸಣ್ಣ ಸುಳಿವನ್ನೂ ತಂಡ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಕೆಲ ದಿನಗಳಲ್ಲಿ ಆ ಕುತೂಹಲವನ್ನೂ ತಂಡ ತಣಿಸಲಿದೆಯಂತೆ.

ಶೂಟಿಂಗ್​ ಶುರು ಮಾಡುತ್ತಿರುವ ಬಗ್ಗೆ ಕಿರು ವಿಡಿಯೋ ತುಣುಕನ್ನು ತಂಡ ಬಿಡುಗಡೆ ಮಾಡಿಕೊಂಡಿದ್ದು, ಸಿನಿಮಾದ ಅಪ್​ಡೇಟ್​​ ಸಲುವಾಗಿ ಕಾದಿದ್ದ ಅಭಿಮಾನಿಗಳಿಗೆ ಇದು ಉಡುಗೊರೆ ರೂಪದಲ್ಲಿ ದಕ್ಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net