ಹೊಸ ಚಿತ್ರಕ್ಕೆ ದೀಪಿಕಾ ಮಾಡಿಕೊಂಡಿರುವ ತಯಾರಿ ಏನು?

Deepika - Final
Published on

ಲಾಕ್‌ಡೌನ್ ಸಂದರ್ಭದಲ್ಲಿ ಬಹಳ ಸಕ್ರಿಯವಾಗಿದ್ದವರೆಂದರೆ, ಅದು ದೀಪಿಕಾ ಪಡುಕೋಣೆ. ಪ್ರತಿದಿನ ಒಂದಲ್ಲಾ ಒಂದು ಕೆಲಸದಲ್ಲಿ ನಿರತರಾಗುವುದರ ಜತೆಗೆ, ಆನ್‌ಲೈನ್ ಮೂಲಕವೇ ಕೆಲವು ಕಥೆಗಳನ್ನೂ ಕೇಳಿ, ಆ ಚಿತ್ರಗಳಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

ಅದೆಲ್ಲಕ್ಕಿಂತ ಹೆಚ್ಚಾಗಿ, ಈ ಅವಧಿಯಲ್ಲಿ ಯೋಗ ಕಲಿಯುವುದರಲ್ಲಿ ಬಿಜಿಯಾಗಿದ್ದರಂತೆ ದೀಪಿಕಾ. ದೀಪಿಕಾ ಯೋಗ ಕಲಿಯುವುದಕ್ಕೆ ಕಾರಣ, ಶಕುನ್ ಬಾತ್ರಾ ನಿರ್ದೇಶನದ ಹೊಸ ಚಿತ್ರ. ಈ ಚಿತ್ರ ಏಪ್ರಿಲ್‌ನಲ್ಲೇ ಪ್ರಾರಂಭವಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್‌ಡೌನ್ ಅದಕ್ಕೆ ಅಡ್ಡಗಾಲು ಹಾಕಿತು.

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಅವರು ಯೋಗಾ ಟೀಚರ್ ಪಾತ್ರ ಮಾಡುತ್ತಿದ್ದಾರೋ ಅಥವಾ ಬೇರೆ ಇನ್ನಾವ ಕಾರಣವೋ ಗೊತ್ತಿಲ್ಲ. ಒಟ್ಟಿನಲ್ಲಿ, ದೀಪಿಕಾ ಕಳೆದ ಕೆಲವು ತಿಂಗಳುಗಳಿಂದ ಪ್ರತಿ ದಿನ ಯೋಗ ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ದೀಪಿಕಾ ಜತೆಗೆ ಈ ಚಿತ್ರದಲ್ಲಿ ಅನನ್ಯಾ ಪಾಂಡೆ ಮತ್ತು ಸಿದ್ಧಾಂತ್ ಚತುರ್ವೇದಿ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈಗ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಇದೆಯಾದರೂ, ಪರಿಸ್ಥಿತಿ ಇನ್ನೊಂದಿಷ್ಟು ಸುಧಾರಿಸಲಿ ಎಂದು ಚಿತ್ರತಂಡದವರು ಶೂಟಿಂಗ್ ಮಾಡುವ ಧೈರ್ಯ ಮಾಡುತ್ತಿಲ್ಲ.

ಇದಲ್ಲದೆ, ಹಾಲಿವುಡ್‌ನ ‘ದಿ ಇಂಟರ್ನ್’ ಚಿತ್ರದ ರೀಮೇಕ್‌ನಲ್ಲೂ ದೀಪಿಕಾ ನಟಿಸುತ್ತಿದ್ದು, ಅದು ಸಹ ಮುಂದಿನ ಕೆಲವು ತಿಂಗಳಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net