More

    ‘ಫ್ರೆಂಚ್​​ ಬಿರಿಯಾನಿ’ಯಲ್ಲಿ ವಾಸುಕಿ ವೈಭವ್​ ಬತ್ತಳಿಕೆಯಿಂದ ಬಂತು ರ್ಯಾಪ್​ ಹಾಡು…

    ಹಂಬಲ್​ ಪೊಲಿಟೀಶಿಯನ್​ ನೊಗರಾಜ್​’ ನಂತರ ದಾನಿಶ್​ ಸೇಠ್​ ಹೀರೋ ಆಗಿ ನಟಿಸಿರುವ ‘ಫ್ರೆಂಚ್​ ಬಿರಿಯಾನಿ’ ಚಿತ್ರವು ಇದೇ 24ರಂದು ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗುತ್ತಿದೆ. ಆ ಚಿತ್ರದ ಟ್ರೈಲರ್​ ಸಹ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದೀಗ ಅದೇ ಚಿತ್ರದ ರ್ಯಾಪ್​ ಶೈಲಿಯ ಹಾಡೊಂದು ಬಿಡುಗಡೆ ಆಗಿದೆ.

    ಇದನ್ನೂ ಓದಿ: ಖ್ಯಾತ ನಿರ್ದೇಶಕನ ವೆಬ್​ಸಿರೀಸ್​ನಲ್ಲಿ ಸೂರ್ಯ, ಫಹಾದ್​ ಫಾಸಿಲ್​ ನಾಯಕರು!?

    ವಾಸುಕಿ ವೈಭವ್​ ಸಂಗೀತ ನಿರ್ದೇಶನ ನೀಡಿರುವ ಈ ಹಾಡಿಗೆ ಸ್ವತಃ ಅವರೇ ಸಾಹಿತ್ಯ ಬರೆದಿದ್ದಾರೆ. ಅವಿನಾಶ್​ ಬಲೇಕಲ್ಲ ಅವರೂ ಕೈ ಜೋಡಿಸಿದ್ದು, ಅತಿಥಿ ದೇವೋ ಭವ ಸಾಲುಗಳಿಂದ ಶುರುವಾಗುವ ಹಾಡಿನಲ್ಲಿ, iಡೀ ಬೆಂಗಳೂರಿನ ಅವಸ್ಥೆ ಬಗ್ಗೆ ಬೆಳಕು ಚೆಲ್ಲಲಾಗಿದೆ. ಆ ಹಾಡಿಗೆ ರ್ಯಾಪ್​ ಟಚ್​ ನೀಡಿದ್ದು, ಸಖತ್​ ಕಲರ್​ಫುಲ್​ ಆಗಿ ಹಾಡು ಮೂಡಿಬಂದಿದೆ.

    ಇದನ್ನೂ ಓದಿ: ನಿಮ್ಮನ್ನ ಸ್ಕ್ರೀನ್​ ಮೇಲೆ ನೋಡೋದು ಯಾವಾಗ? ಈ ಪ್ರಶ್ನೆಗೆ ಏನಂದ್ರು ರಾಧಿಕಾ?

    ಅದಿತಿ ಸಾಗರ್​ ಹಾಡಿಗೆ ಧ್ವನಿ ನೀಡಿದ್ದು, ಪ್ರತೀಕ್​ ಶೆಟ್ಟಿ, ಛಾಯಾಗ್ರಹಣದ ಜತೆಗೆ ಸಂಕಲನದ ಕೆಲಸವನ್ನೂ ಮಾಡಿದ್ದಾರೆ. ಸುಹಾಸ್​ ನೃತ್ಯ ಸಂಯೋಜನೆ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ದಾನಿಶ್​ ಸೇಠ್ ಬೆಂಗಳೂರಿನ ಆಟೋಡ್ರೈವರ್ ಆಗಿ ಕಾಣಿಸಿಕೊಂಡರೆ, ಚಿತ್ರದ ನಿರ್ದೇಶನ ಜವಾಬ್ದಾರಿ ಪನ್ನಗಾ ಭರಣ ಅವರದ್ದು.

    ಈ ಹಿಂದೆ ಪುನೀತ್​ ನಿರ್ಮಿಸಿದ್ದ ‘ಕವಲು ದಾರಿ’ ಮತ್ತು ‘ಮಾಯಾ ಬಜಾರ್​’ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ನಂತರ ಅಮೇಜಾನ್​ ಪ್ರೈಮ್​ನಲ್ಲಿ ಕಾಣಿಸಿಕೊಂಡಿದ್ದವು. ಆದರೆ, ಈ ಬಾರಿ ‘ಲಾ’ ಮತ್ತು ‘ಫ್ರೆಂಚ್​ ಬಿರಿಯಾನಿ’ ಚಿತ್ರಗಳು ಚಿತ್ರಮಂದಿರಗಳಿಗಿಂತ ಮುಂಚಿತವಾಗಿ ನೇರವಾಗಿ ಅಮೆಜಾನ್​ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿವೆ. ದಾನಿಶ್​ ಜತೆಗೆ, ಸಾಲ್ ಯೂಸಫ್​, ರಂಗಾಯಣ ರಘು, ದಿಶಾ ಮದನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    ಲಾಕ್​ಡೌನ್​ನಲ್ಲಿ ಚಾರ್ಮಿ ಮತ್ತು ಪುರಿ ಜಗನ್ನಾಥ್​ ಏನ್ಮಾಡ್ತಿದ್ದರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts