ಖ್ಯಾತ ನಿರ್ದೇಶಕನ ವೆಬ್​ಸಿರೀಸ್​ನಲ್ಲಿ ಸೂರ್ಯ, ಫಹಾದ್​ ಫಾಸಿಲ್​ ನಾಯಕರು!?

Surya Fahad
Published on

ವೆಬ್​ಸಿರೀಸ್​ ನಿರ್ಮಾಣ ಮಾಡುವ ಬಗ್ಗೆ ನಿರ್ದೇಶಕ ಮಣಿರತ್ನಂ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು. ಅದರಂತೆ ಇದೀಗ ಆ ವೆಬ್​ಸಿರೀಸ್​ನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಕಾಲಿವುಡ್​ನ ಖ್ಯಾತ ನಟ ಸೂರ್ಯ ಮತ್ತು ಮಲಯಾಳಂನ ಫಹಾದ್ ಫಾಸಿಲ್​ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ನವರಸ ಶೀರ್ಷಿಕೆಯ ವೆಬ್​ಸಿರೀಸ್​ನಲ್ಲಿ ಒಟ್ಟು ಒಂಭತ್ತು ಏಪಿಸೋಡ್​ಗಳು ಇರಲಿದ್ದು, ಒಂಭತ್ತು ನಿರ್ದೇಶಕರು ಒಂದೊಂದು ಏಪಿಸೋಡ್​ಗೆ ನಿರ್ದೇಶನ ಮಾಡಲಿದ್ದಾರೆ. ಸುಧಾ ಕೊಂಗಾರಾ, ಜಯೇಂದ್ರ, ಗೌತಮ್​ ಮೆನನ್​, ಬಿಜೋಯ್​ ನಂಬಿಯಾರ್​, ಕಾರ್ತಿಕ್​ ನರೇನ್​, ಕೆ.ವಿ ಆನಂದ್​, ಈಗಾಗಲೇ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ತಲಾ ಒಂದೊಂದು ಸಂಚಿಕೆಯನ್ನು ನಿರ್ದೇಶನ ಮಾಡಲಿದ್ದಾರೆ.

ಇನ್ನುಳಿದಂತೆ ನಿರ್ಮಾಣದ ಜತೆಗೆ ಒಂದು ಸಂಚಿಕೆಗೆ ಸ್ವತಃ ಮಣಿರತ್ನಂ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದ್ದು, ಆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಪಾತ್ರವರ್ಗದಲ್ಲಿ ವಿಜಯ್​ ಸೇತುಪತಿ ಸಹ ನಟಿಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ಅರವಿಂದ್ ಸ್ವಾಮಿ ಮತ್ತು ಸಿದ್ಧಾರ್ಥ್​ ಸಹ ಮೊದಲ ಬಾರಿ ನವರಸ ವೆಬ್​ಸಿರೀಸ್​ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net