ಸುಶಾಂತ್ ಪ್ರಕರಣವನ್ನು ಸಿಬಿಐಗೆ ನೀಡಿ ಎಂದ ನಿರ್ಭಯಾ ರೇಪ್​ ಕೇಸ್​ನ ವಕೀಲೆ!

nirbhaya
Published on

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ತನಿಖೆ ಪ್ರಗತಿಯಲ್ಲಿದೆ. ಬಾಲಿವುಡ್​ನ ಘಟಾನುಘಟಿಗಳನ್ನು ಈಗಾಗಲೇ ಮುಂಬೈ ಪೊಲೀಸ್​ ಪಡೆ ವಿಚಾರಣೆ ಮಾಡುತ್ತಿದೆ. ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಸಿನಿಮಾ ಮಂದಿ ಸೇರಿ ರಾಜಕೀಯ ವ್ಯಕ್ತಿಗಳೂ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಪತ್ರ ಬರೆದಿದ್ದಾರೆ. ಇತ್ತೀಚೆಗಷ್ಟೇ ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ ಸಹ ಮನವಿ ಮಾಡಿದ್ದರು. ಇದೀಗ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ವಕೀಲೆ ಸಹ ಸಿಬಿಐಗೆ ನೀಡುವಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.

‘ಮಾನ್ಯ ಪ್ರಧಾನಿಗಳೇ, ಸುಶಾಂತ್​ ಸಿಂಗ್​ ಅವರ ಸಾವಿನ ಅಸಲಿಯತ್ತನ್ನು ಪ್ರತಿ ಭಾರತೀಯನಿಗೂ ಗೊತ್ತಾಗಬೇಕಿದೆ. ಸುಶಾಂತ್​ ಸಾವಿಗೀಡಾಗಿ ಒಂದು ತಿಂಗಳಾಗುತ್ತ ಬಂದರೂ, ಮುಂಬೈ ಪೊಲೀಸ್​ ಸತ್ಯ ವಿಚಾರವನ್ನು ಹೊರಗೆಡುವುತ್ತಿಲ್ಲ. ಹಾಗಾಗಿ ದಯಮಾಡಿ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿ ಎಂದು ಸೀಮಾ ಸಮೃದ್ಧಿ ಟ್ವಿಟರ್​ನಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ, ಗೃಹ ಸಚಿವ ಅಮಿತ್ ಷಾ ಅವರಿಗೆ ಟ್ವಿಟರ್ ಮೂಲಕ ಮನವಿ ಮಾಡಿಕೊಂಡಿದ್ದರು. ‘ಸುಶಾಂತ್ ನಿಧನರಾಗಿ ಒಂದು ತಿಂಗಳಾಗಿದೆ. ಸುಶಾಂತ್ ಯಾಕೆ ಆತ್ಮಹತ್ಯೆ ಮಾಡಿಕೊಂಡರು, ಅವರಿಗೆ ಏನೆಲ್ಲಾ ಒತ್ತಡಗಳಿದ್ದವು ಎಂದು ತಿಳಿಯಬೇಕಿದೆ. ಅವರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎಂದು ಕೈ ಮುಗಿದು ಪ್ರಾರ್ಥಿಸುತ್ತೇನೆ’ ಎಂದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net