ಅಂದಹಾಗೆ, ನಟಿ ದೀಪಿಕಾ ಪಡುಕೋಣೆ ಕಪ್ಪು-ಬಿಳಿ ಬಣ್ಣದ ಜೀಬ್ರಾ ಪ್ರಿಂಟ್ನ ಕೋಟ್ ಧರಿಸಿ, ಲೆಂಥಿ ಬೂಟ್ಗಳನ್ನು ಹಾಕಿಕೊಂಡು ಕಾಣಿಸಿಕೊಂಡಿದ್ದರು. ಸದ್ಯ, ನಟಿಯ ಇದೇ ಉಡುಪು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇದು ಬಟ್ಟೆಯೇ ಅಲ್ಲ ಎಂದು ಸಾಕಷ್ಟು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ನಟಿ ಒಂದು ಶಾರ್ಟ್ಸ್ ಅಥವಾ ಪ್ಯಾಂಟ್ ಧರಿಸಿರುವುದು ಕಾಣಿಸಿಲ್ಲ. ಹಾಗಾಗಿ, ದೀಪಿಕಾ ಅವರು ಪ್ಯಾಂಟ್ ಮರೆತಿದ್ದಾರೆ ಎಂಬ ಕಾಮೆಂಟ್ಗಳ ಮಳೆ ಸುರಿದಿದೆ. ಇನ್ನು, ಕೆಲವು ಬುದ್ಧಿವಂತ ನೆಟ್ಟಿಗರು ನಟಿ ದೀಪಿಕಾ ತಮ್ಮ ಪತಿ ರಣ್ವೀರ್ ಸಿಂಗ್ ಬಟ್ಟೆ ಹಾಕಿದ್ದಾರೆ ಎಂದು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಮತ್ತೊಂದೆಡೆ, ನಟಿ ಅನನ್ಯಾ ಪಾಂಡೆ 'ಗೆಹ್ರಾಯಿಯಾನ್' ಪ್ರಚಾರದಲ್ಲಿ ಕೊಂಚ ಹೆಚ್ಚಾಗಿಯೇ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಹೋಗಿ ಪ್ಯಾಂಟ್ ಮತ್ತು ಟ್ಯೂಬ್ ಟಾಪ್ ಧರಿಸಿದ್ದು ಪರದಾಡುತ್ತಿದ್ದರು.