ದರ್ಶನ್​ ಅಭಿನಯದ ‘ರಾಬರ್ಟ್’ ಬಿಡುಗಡೆ ಸದ್ಯಕ್ಕಿಲ್ಲ

Robert
Published on

ಬೆಂಗಳೂರು: ದರ್ಶನ್ ಅಭಿನಯದ ‘ರಾಬರ್ಟ್’ ಬಿಡುಗಡೆ ಯಾವಾಗ? ಇಂಥದ್ದೊಂದು ಪ್ರಶ್ನೆ ದರ್ಶನ್ ಅವರ ಅಭಿಮಾನಿಗಳನ್ನು ಹಲವು ದಿನಗಳಿಂದ ಕಾಡುತ್ತಿದೆ. ಆದರೆ, ಇದಕ್ಕೆ ಸೂಕ್ತ ಉತ್ತರ ಸಿಕ್ಕಿರಲಿಲ್ಲ. ಇದೀಗ ಈ ಕುರಿತು ಮಾತನಾಡಿರುವ ನಿರ್ದೇಶಕ ತರುಣ್ ಸುಧೀರ್, ‘ನಾವೇನೋ ಈ ವರ್ಷ ಏಪ್ರಿಲ್​ನಲ್ಲೇ ಚಿತ್ರ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದೆವು. ಆದರೆ, ಲಾಕ್​ಡೌನ್ ಬಂತು. ಸದ್ಯಕ್ಕೆ, ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಮಾತ್ರ ಆಸನಗಳನ್ನು ಭರ್ತಿ ಮಾಡಬಹುದು, ಈಗಿನ ಪರಿಸ್ಥಿತಿಯಲ್ಲಿ ಬಿಡುಗಡೆ ಕಷ್ಟ. ನಮ್ಮದು ದೊಡ್ಡ ಬಜೆಟ್​ನ ಚಿತ್ರ. ಇಂತಹ ಸಂದರ್ಭದಲ್ಲಿ ಬಿಡುಗಡೆ ಮಾಡಿದರೆ ನಿರ್ವಪಕರ ಗತಿ ಏನು? ಸೂಕ್ತ ಸಮಯಕ್ಕೆ ಚಿತ್ರ ಬಿಡುಗಡೆ ಮಾಡುತ್ತೇವೆ’ ಎನ್ನುತ್ತಾರೆ.

‘ಗುರುಶಿಷ್ಯರು’ ಟೈಟಲ್ ಲೋಕಾರ್ಪಣೆ: ಇನ್ನು ತರುಣ್ ಸುಧೀರ್ ಮತ್ತು ಶರಣ್ ಜತೆಯಾಗಿ ನಿರ್ವಿುಸುತ್ತಿರುವ ಹೊಸ ಚಿತ್ರಕ್ಕೆ ‘ಗುರುಶಿಷ್ಯರು’ ಎಂಬ ಹೆಸರನ್ನು ಇಡಲಾಗಿದ್ದು, ಮೂಲ ‘ಗುರುಶಿಷ್ಯರು’ ಚಿತ್ರವನ್ನು ನಿರ್ವಿುಸುವುದರ ಜತೆಗೆ ಅದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದ್ವಾರಕೀಶ್ ಅವರಿಂದ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಸಲಾಗಿದೆ. ಶರಣ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರವನ್ನು ಜಡೇಶ್ ನಿರ್ದೇಶಿಸುತ್ತಿದ್ದು, ಸಂಕ್ರಾಂತಿ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net