ನಟನಾಗಿದ್ದ ಆಯುಷ್ಮಾನ್​ ಖುರಾನಾ ಇದೀಗ ‘ಡಾಕ್ಟರ್’ ಆಗೋಕೆ ಹೊರಟಿದ್ದಾರೆ!

Ayushman
Published on

ಮುಂಬೈ: ಬಾಲಿವುಡ್​ನ ಯಶಸ್ವಿ ನಟ ಆಯುಷ್ಮಾನ್​ ಖುರಾನಾ ಸಿನಿಮಾ ಆಯ್ದುಕೊಳ್ಳುವಲ್ಲಿ ಹೆಚ್ಚು ನಿಸ್ಸೀಮರು. ಅವರ ಬತ್ತಳಿಕೆಯಿಂದ ಬಂದಿರುವ ಸಿನಿಮಾಗಳನ್ನೊಮ್ಮೆ ನೋಡಿದರೆ, ಅವರ ರುಚಿ ಎಂಥದ್ದು ಎಂಬುದು ಗೊತ್ತಾಗುತ್ತದೆ. ಇದೀಗ ಅವರ ಸಿನಿಮಾ ಖಾತೆಗೆ ಮತ್ತೊಂದು ವಿಭಿನ್ನ ಮತ್ತು ವಿಶೇಷ ಸಿನಿಮಾ ಸೇರ್ಪಡೆಗೊಳ್ಳುತ್ತಿದೆ. ಅದೇ ಡಾಕ್ಟರ್ ಜಿ!

ಹೌದು, ಡಾಕ್ಟರ್ ಜಿ ಪಕ್ಕಾ ಕಾಮಿಡಿ ಕಥಾಹಂದರವುಳ್ಳ ಸಿನಿಮಾ. ಈ ಚಿತ್ರದಲ್ಲಿ ಡಾಕ್ಟರ್ ಆಗಿ ಆಯುಷ್ಮಾನ್​ ಕಾಣಿಸಿಕೊಳ್ಳಲಿದ್ದು, ನಿರ್ದೇಶಕಿ ಅನುಭೂತಿ ಕಶ್ಯಪ್ ಈ ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅಂದಹಾಗೆ, ದಬಂಗ್ ಸಿನಿಮಾ ನಿರ್ದೇಶನ ಮಾಡಿದ್ದ ಅಭಿನವ್ ಕಶ್ಯಪ್, ನಿರ್ದೇಶಕ ಅನುರಾಗ್ ಕಶ್ಯಪ್​ ಅವರ ಸಹೋದರಿಯೇ ಈ ಅನುಭೂತಿ ಕಶ್ಯಪ್. ಹಲವು ಕಿರುಚಿತ್ರಗಳನ್ನು ಮಾಡಿದ ಅನುಭವ ಇರುವ ಅನುಭೂತಿ, ಇದೀಗ ಪೂರ್ಣ ಪ್ರಮಾಣದ ಸಿನಿಮಾ ಆಯ್ದುಕೊಂಡಿದ್ದಾರೆ.

ಈ ಹಿಂದೆ ಆಯುಷ್ಮಾನ್ ಜತೆಗೆ ಬರೇಲಿ ಕೀ ಬರ್ಫಿ, ಬದಾಯಿ ಹೋ ಸಿನಿಮಾ ನಿರ್ಮಾಣ ಮಾಡಿದ್ದ ಜಂಗ್ಲಿ ಪಿಕ್ಚರ್ಸ್ ಸಂಸ್ಥೆ ಈ ಚಿತ್ರವನ್ನೂ ನಿರ್ಮಾಣ ಮಾಡುತ್ತಿದ್ದು, ಸುಮಿತ್ ಸಕ್ಸೆನಾ, ಸೌರಬ್ ಭರತ್, ವಿಶಾಲ್ ವಾಘ್, ಅನುಭೂತಿ ಕಶ್ಯಪ್ ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಶೀಘ್ರದಲ್ಲಿ ಇನ್ನುಳಿದ ಪಾತ್ರವರ್ಗದ ಆಯ್ಕೆ ಮುಗಿಯಲಿದ್ದು, 2021ರ ಫೆಬ್ರವರಿ ವೇಳೆಗೆ ಈ ಸಿನಿಮಾ ಸೆಟ್ಟೇರಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net