More

    ರಾಖಿ ಋಣವನ್ನು ಈ ಜನ್ಮದಲ್ಲಿ ತೀರಿಸೋಕೆ ಸಾಧ್ಯವಿಲ್ಲ: ರಿತೇಶ್​

    ಮುಂಬೈ: ‘ಬಿಗ್​ ಬಾಸ್​’ನ 14ನೇ ಸೀಸನ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ರಾಖಿ ಸಾವಂತ್​, ಕಳೆದ ವರ್ಷ ಇಂಗ್ಲೆಂಡ್​ ಮೂಲದ ಬ್ಯುಸಿನೆಸ್​ಮ್ಯಾನ್​ ರಿತೇಶ್​ ಎನ್ನುವವರನ್ನು ಮದುವೆಯಾಗಿರುವ ವಿಷಯ ಗೊತ್ತಿರಬಹುದು. ಆದರೆ, ಇದುವರೆಗೂ ರಿತೇಶ್​ ಯಾರು ಎಂದು ಯಾರೂ ನೋಡಿಲ್ಲ. ಮದುವೆ ಫೋಟೋಗಳಲ್ಲೂ ರಿತೇಶ್​ ಕಾಣದಂತೆ ಎಡಿಟ್​ ಮಾಡಿದ್ದಾರೆ.

    ಇದನ್ನೂ ಓದಿ: ನಮ್ಮ ಫ್ಲಿಕ್ಸ್ ಓಟಿಟಿಯಲ್ಲಿ ಡಿ.25ಕ್ಕೆ ‘ಭೂಮಿಕಾ’ ಸಿನಿಮಾ ಬಿಡುಗಡೆ

    ಇದೀಗ, ರಿತೇಶ್ ತಾವ್ಯಾರು ಎಂದು ಹೇಳುವುದಕ್ಕೆ ತಯಾರಿದ್ದಾರಂತೆ. ತಮ್ಮ ಗುರುತು ಹೇಳಿಕೊಳ್ಳುವುದರಿಂದ ವ್ಯವಹಾರಕ್ಕೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ತಮ್ಮ ನಿಜ ಗುರುತನ್ನು ಬಚ್ಚಿಟ್ಟಿದ್ದಾಗಿ ಹೇಳಿಕೊಂಡಿರುವ ರಿತೇಶ್, ಬೇಕಾದರೆ, ‘ಬಿಗ್​ ಬಾಸ್​’ಗೂ ಬರುವುದಕ್ಕೆ ತಯಾರಿದ್ದಾರಂತೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ರಿತೇಶ್​, ‘ನಾನು ರಾಖಿಯನ್ನು ಮದುವೆಯಾಗಿರುವುದಾಗಿ ಜಗತ್ತಿಗೆ ಗೊತ್ತಾದರೆ, ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಳ್ಳುತ್ತದೆ ಮತ್ತು ಇದರಿಂದ ನನ್ನ ವ್ಯವಹಾರಕ್ಕೆ ಪೆಟ್ಟು ಬೀಳುತ್ತದೆ ಎಂಬ ಭಯವಿತ್ತು. ನನ್ನ ಶೇರ್​ಗಳ ಮೌಲ್ಯ ಕುಸಿಯಬಹುದು ಎಂದು ಟೆನ್ಶನ್​ ಆಗಿತ್ತು. ಹಾಗಾಗಿ ಎಲ್ಲೂ ನನ್ನ ಗುರುತು ಹೇಳಿಕೊಂಡಿರಲಿಲ್ಲ’ ಎನ್ನುತ್ತಾರೆ ರಿತೇಶ್​.

    ಇದನ್ನೂ ಓದಿ: ಹೊಸ ರೂಪಾಂತರ ಕರೊನಾ ವೈರಸ್ ಭೀತಿ: ಲಂಡನ್​ನಿಂದ ಬಂದ ಮೇಲೆ ಕ್ವಾರಂಟೈನ್​ ಆಗದ ಹರ್ಷಿಕಾ!

    ರಾಖಿ ತಮ್ಮನ್ನು ಮದುವೆಯಾಗಿ ದೊಡ್ಡ ಉಪಕಾರ ಮಾಡಿದ್ದಾರೆ ಎನ್ನುವ ರಿತೇಶ್​, ‘ನಾನಾಗಲೀ, ನನ್ನ ಮನೆಯವರಾಗಲೀ ರಾಖಿ ಅವರ ಋಣವನ್ನು ಈ ಜನ್ಮದಲ್ಲಿ ತೀರಿಸುವುದಕ್ಕೆ ಸಾಧ್ಯವಿಲ್ಲ. ಆಕೆ ನಿಜವಾದ ಗೆಳತಿ ಮತ್ತು ಮಡದಿ. ನನ್ನನ್ನು ಬಹಳವಾಗಿ ಅರ್ಥ ಮಾಡಿಕೊಂಡಿರುವ ರಾಖಿ, ನನ್ನ ಮನವಿಯ ಮೇರೆಗೆ ಇದುವರೆಗೂ ಎಲ್ಲೂ ನನ್ನ ಬಗ್ಗೆ ಮಾತನಾಡಿಲ್ಲ. ಅಷ್ಟೇ ಅಲ್ಲ, ಎಷ್ಟು ಸಾಧ್ಯವೋ ಅಷ್ಟು ಸಪೋರ್ಟ್​ ಮಾಡಿದ್ದಾರೆ. ನನ್ನ ಗುರುತು ಹೇಳದಿರುವ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಅವರ ಒಳ್ಳೆಯತನಕ್ಕೆ ಬೆಲೆಕಟ್ಟುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಮಾಧ್ಯಮದವರ ಮುಂದೆ ಬಂದು ನನ್ನ ಗುರುತನ್ನು ಹೇಳಿಕೊಳ್ಳುತ್ತೇನೆ. ಇನ್ನು ನಾನು ವ್ಯವಹಾರದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಲಾಭ-ನಷ್ಟದ ಬಗ್ಗೆ ಯೋಚಿಸದೆ ನಮ್ಮ ಮದುವೆಯ ವಿಷಯವನ್ನು ಜಗತ್ತಿಗೆ ಹೇಳುತ್ತೇನೆ’ ಎಂದಿದ್ದಾರೆ.

    ತಾಜ್​ ಮಹಲ್​ ಎದುರು ಏನು ಮಾಡ್ತಿದ್ದಾರೆ ಅಕ್ಷಯ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts