More

    ತಾಜ್​ ಮಹಲ್​ ಎದುರು ಏನು ಮಾಡ್ತಿದ್ದಾರೆ ಅಕ್ಷಯ್​?

    ಆಗ್ರಾ: ಲಾಕ್​ಡೌನ್​ ನಂತರ ಅಕ್ಷರಶಃ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿರುವ ಅಕ್ಷಯ್​ ಕುಮಾರ್, ಈಗಾಗಲೇ ‘ಬೆಲ್​ ಬಾಟಮ್​’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ‘ಪೃಥ್ವಿರಾಜ್​’ ಚಿತ್ರದ ಒಂದು ಹಂತದ ಚಿತ್ರೀಕರಣದಲ್ಲೂ ಭಾಗವಹಿಸಿರುವ ಅವರು, ಆನಂದ್​ ಎಲ್​ ರೈ ನಿರ್ದೇಶನದ ‘ಅತರಂಗಿ ರೇ’ ಚಿತ್ರದ ಸೆಟ್​ಗೆ ಬಂದಿದ್ದಾರೆ.

    ಇದನ್ನೂ ಓದಿ: ಮತ್ತೊಂದು ಚಿತ್ರ ಒಪ್ಪಿಕೊಂಡ ಶಶಿಕುಮಾರ್ ಪುತ್ರ …

    ಈಗಾಗಲೇ, ‘ಅತರಂಗಿ ರೇ’ ಚಿತ್ರದ ಚಿತ್ರೀಕರಣ ದೆಹಲಿಯಲ್ಲಿ ಮುಗಿದಿದೆ. ಅಕ್ಷಯ್​ ಮತ್ತು ಸಾರಾ ಈ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಈಗ ಚಿತ್ರ ಆಗ್ರಾದಲ್ಲಿ ತಾಜ್​ ಮಹಲ್​ ಎದುರು ಚಿತ್ರೀಕರಣ ಮಾಡುವಲ್ಲಿ ನಿರತವಾಗಿದೆ.

    ಕಳೆದೆರೆಡು ದಿನಗಳಿಂದ ತಾಜ್​ ಮಹಲ್​ ಎದುರು ಚಿತ್ರೀಕರಣ ನಡೆಯುತ್ತಿದ್ದು, ಅಕ್ಷಯ್​ ಕುಮಾರ್​ ಅವರು ಮೊಘಲರ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಾರಾ ಅಲಿ ಖಾನ್​ ಸಹ ಪಿಂಕ್​ ಗಾಗ್ರಾ ಚೋಲಿಯಲ್ಲಿ ಮಿಂಚುತ್ತಿದ್ದಾರೆ. ಸನ್ನಿವೇಶವೇನು ಮತ್ತು ಅಕ್ಷಯ್​ ಹಾಗೂ ಸಾರಾ ಯಾಕೆ ಆ ಕಾಸ್ಟ್ಯೂಮ್​ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ವಿಷಯ ಬಹಿರಂಗವಾಗಿಲ್ಲ. ಇದನ್ನು ರಹಸ್ಯವಾಗಿಟ್ಟಿರುವ ಚಿತ್ರತಂಡವು, ಪ್ರಮುಖ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳುತ್ತಿದೆ. ಇನ್ನು ತಮಿಳು ನಟ ಧನುಶ್​ ಸಹ ಈ ಭಾಗದ ಚಿತ್ರೀಕರಣದಲ್ಲಿ ಭಾಗಿಯಾದ್ದಾರೆ.

    ಇದನ್ನೂ ಓದಿ: ನಮ್ಮ ಫ್ಲಿಕ್ಸ್ ಓಟಿಟಿಯಲ್ಲಿ ಡಿ.25ಕ್ಕೆ ‘ಭೂಮಿಕಾ’ ಸಿನಿಮಾ ಬಿಡುಗಡೆ

    ಈ ಹಿಂದೆ, ಶಾರೂಖ್​ ಖಾನ್​ ಅಭಿನಯದ ‘ಜೀರೋ’ ಚಿತ್ರವನ್ನು ನಿರ್ದೇಶಿಸಿದ್ದ ಆನಂದ್​ ರೈ, ಇದೇ ಮೊದಲ ಬಾರಿಗೆ ಅಕ್ಷಯ್​ ಕುಮಾರ್​ ಮತ್ತು ಸಾರಾ ಅಲಿ ಖಾನ್​ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಈ ವರ್ಷದ ಆರಂಭದಲ್ಲೇ ‘ಅತರಂಗಿ ರೇ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ.

    ಹೊಸ ರೂಪಾಂತರ ಕರೊನಾ ವೈರಸ್ ಭೀತಿ: ಲಂಡನ್​ನಿಂದ ಬಂದ ಮೇಲೆ ಕ್ವಾರಂಟೈನ್​ ಆಗದ ಹರ್ಷಿಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts