

ಬೆಂಗಳೂರು: ಬ್ರಿಟನ್ನಲ್ಲಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ಜಗತ್ತು ಮತ್ತೊಮ್ಮೆ ಆತಂಕಕ್ಕೆ ಒಳಗಾಗಿದೆ. ದೇಶದಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ವಿದೇಶ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಹೀಗಿರುವಾಗ ಇತ್ತೀಚೆಗಷ್ಟೇ ವಿದೇಶದ ಪ್ರವಾಸ ಮುಗಿಸಿ ಬಂದಿರುವ ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಕ್ವಾರಂಟೈನ್ಗೆ ಒಳಗಾಗದಿರುವುದು ಗಮನಕ್ಕೆ ಬಂದಿದೆ. ಹರ್ಷಿಕಾ ಲಂಡನ್ನಿಂದ ಕಳೆದವಾರಷ್ಟೇ ಬೆಂಗಳೂರಿಗೆ ಬಂದಿದ್ದಾರೆ. ಲಂಡನ್ನ ಬೀದಿ ಬೀದಿಯಲ್ಲಿ ಹರ್ಷಿಕಾ ಸುತ್ತಾಡಿದ್ದು, ಅಲ್ಲಿಂದ ತವರಿಗೆ ಮರಳಿದ ಮೇಲೆ ನಟಿ ಕ್ವಾರಂಟೈನ್ ಕೂಡ ಆಗಿಲ್ಲ.
ಇನ್ನು ಇಂಗ್ಲೆಂಡ್ನಲ್ಲಿ ಹೊಸ ರೂಪಾಂತರ ವೈರಸ್ ಕಾಟ ಹೆಚ್ಚಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಬ್ರಿಟನ್ಗೆ ಹಾರಾಡುವ ವಿಮಾನಗಳನ್ನು ಬ್ಯಾನ್ ಮಾಡಿದೆ. ವಿಮಾನ ಹಾರಾಟ ಬ್ಯಾನ್ ಮಾಡುವ ಮುನ್ನವೇ ಹರ್ಷಿಕಾ ಬೆಂಗಳೂರಿಗೆ ಆಗಮಿಸಿದ್ದಾರೆ. ಹೀಗಾಗಿ ನಟಿ ಕ್ವಾರಂಟೈನ್ ಒಳಗಾಗುವುದು ಸೂಕ್ತ ಎನಿಸಿದೆ.
ಅಂದಹಾಗೆ ಬ್ರಿಟನ್ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರ ಕರೊನಾ ವೈರಸ್ ಹಿಂದಿನ ವೈರಸ್ಗಿಂತಲೂ ಹೆಚ್ಚು ಅಪಾಯಕಾರಿ ಎನ್ನಲಾಗುತ್ತಿದೆ. ಅಲ್ಲದೆ, ಗರಿಷ್ಠ 70ಕ್ಕಿಂತಲೂ ವೈರಸ್ ವೇಗವಾಗಿ ಹರಡುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಸುಮಾರು 30 ದೇಶಗಳು ಬ್ರಿಟನ್ಗೆ ಹೋಗುವ ವಿಮಾನಗಳನ್ನು ಬ್ಯಾನ್ ಮಾಡಿವೆ. (ಏಜೆನ್ಸೀಸ್)