More

    ಮತ್ತೊಂದು ಚಿತ್ರ ಒಪ್ಪಿಕೊಂಡ ಶಶಿಕುಮಾರ್ ಪುತ್ರ …

    ಬೆಂಗಳೂರು: ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್‍ಗೆ ಒಂದರ ಹಿಂದೊಂದರಂತೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ‘ಸೀತಾಯಣ’ ಮತ್ತು ‘ಸಮಿತ್​’ ಚಿತ್ರಗಳ ನಂತರ ಅಕ್ಷಿತ್​ ಇದೀಗ ‘ಓ ಮೈ ಲವ್​’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು, ಇತ್ತೀಚೆಗೆ ಚಿತ್ರದ ಫೋಟೋಶೂಟ್​ ಸಹ ಮುಗಿದಿದೆ.

    ಇದನ್ನೂ ಓದಿ: ‘ಎಂಆರ್’ ನಿಲ್ಲುವುದಿಲ್ಲ … ಚಿತ್ರ ಮುಂದುವರೆಸಲು ರವಿ ಶ್ರೀವತ್ಸ ನಿರ್ಧಾರ

    ಅಕ್ಷಿತ್​ ಅವರ ಹಿಂದಿನ ಚಿತ್ರಗಳಂತೆ, ಈ ಚಿತ್ರ ಸಹ ಒಂದು ಲವ್​ಸ್ಟೋರಿ. ಈ ಹಿಂದೆ ‘ತೂಫಾನ್’, ‘ಬಳ್ಳಾರಿ ದರ್ಬಾರ್’ ಹಾಗೂ ’18 ಟು 25′ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್​ ಶ್ರೀನು, ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಚಿತ್ರಕಥೆಯನ್ನು ಸಹ ರಚಿಸಿದ್ದಾರೆ.

    ರೊಮ್ಯಾಂಟಿಕ್ ಜಾನರ್​ನ ಈ ಚಿತ್ರದಲ್ಲಿ ಹದಿಹರೆಯದ ವಯಸಿನಲ್ಲಿ ಯುವ ಹೃದಯಗಳ ಮನದಲ್ಲಿ ಉಂಟಾಗುವ ತಳಮಳ, ಪ್ರೀತಿ, ಪ್ರೇಮದ ಕುರಿತಾಗಿ ಹೇಳಲಾಗುತ್ತಿದೆ. ಜಿಸಿಬಿ ರಾಮಾಂಜಿನಿ ಅವರು ಈ ಚಿತ್ರದ ಕಥೆ ಬರೆಯುವುದರೊಂದಿಗೆ ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.

    ಇದನ್ನೂ ಓದಿ: ವಾಪಸ್​ ಬಂದ್ರು ರಂಗೀಲಾ ಬೆಡಗಿ ಊರ್ಮಿಳಾ ಮಾತೊಂಡ್ಕರ್​…

    ಅಕ್ಷಿತ್ ಶಶಿಕುಮಾರ್ ಜೊತೆ ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿಸುತ್ತಿದ್ದು, ಸಾಧು ಕೋಕಿಲಾ, ದೀಪಿಕಾ ಆರಾಧ್ಯ ಸೇರಿದಂತೆ ಇತರರೂ ಈ ಚಿತ್ರದಲ್ಲಿರುತ್ತಾರೆ. ಡಾ.ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಚರಣ್ ಅರ್ಜುನ್ ಅವರ ಸಂಗೀತ ಈ ಚಿತ್ರಕ್ಕಿರಲಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ, ಹೈದರಾಬಾದ್ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.

    ಪುಸ್ತಕ ಬರೀತಿದ್ದಾರೆ ಕರೀನಾ ಕಪೂರ್​ … ಮುಂದಿನ ವರ್ಷ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts