ಟಿಕ್ ಟಾಕ್​ಗೆ ಎಳ್ಳು ನೀರು ಬಿಟ್ಟ ದರ್ಶನ್​ ಅಭಿಮಾನಿಗಳು..

darshan
Published on

ಚೀನಾ ಉತ್ಪನ್ನಗಳಿಗೆ ಬಳಕೆಯನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಒಂದಷ್ಟು ಜನ ಮುಂದೆ ಬಂದು, ನಾವಿನ್ನು ಚೀನಾ ಉತ್ಪನ್ನಗಳನ್ನು, ಅಪ್ಲಿಕೇಷನ್​ಗಳನ್ನು ಬಳಸುವುದಿಲ್ಲ ಎನ್ನುತ್ತಿದ್ದಾರೆ. ಮತ್ತೆ ಕೆಲವರು ರೊಚ್ಚಿಗೆದ್ದು, ಚೀನಿ ವಸ್ತುಗಳಿಗೆ ನಡುರಸ್ತೆಯಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಇದೀಗ ಸ್ಯಾಂಡಲ್​ವುಡ್​ ನಟ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅಭಿಮಾನಿಗಳೂ, ಆ ಕಾರ್ಯಕ್ಕೆ ಇಳಿದಿದ್ದಾರೆ. ಹಾಗಂತ ಬೀದಿಗಿಳಿದು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕುತ್ತಿಲ್ಲ. ಬದಲಿಗೆ ನೆಚ್ಚಿನ ನಟನಿಗಾಗಿಯೇ ತೆರೆದಿದ್ದ ಡಿ ಟೀಮ್​ ಟಿಕ್​ಟಾಕ್​ ಖಾತೆಯನ್ನು ಡಿಲಿಟ್​ ಮಾಡಿ, ರಾಷ್ಟ್ರಪ್ರೇಮವನ್ನು ಹೊರಹಾಕಿದ್ದಾರೆ.

ಹೌದು, 23 ಸಾವಿರಕ್ಕೂ ಅಧಿಕ ಫಾಲೋವರ್ಸ್​ ಹೊಂದಿರು ಡಿ ಟೀಮ್​ ಖಾತೆ, ಇಲ್ಲಿಯವರೆಗೂ ನೂರಾರು ವಿಡಿಯೋಗಳನ್ನು ಮಾಡಿ ಹಂಚಿಕೊಂಡಿತ್ತು. 7 ಲಕ್ಷಕ್ಕೂ ಅಧಿಕ ಲೈಕ್ಸ್ ಗಳೂ ಸಂದಾಯವಾಗಿದ್ದವು. ಇದೀಗ ಭಾರತೀಯ ಸೈನಿಕರ ಮೇಲೆ ಚೀನಾ ನಡೆಸಿದ ದಾಳಿ ಖಂಡಿಸಿ, ಚೀನಾದ ಟಿಕ್​ ಟಾಕ್​ ಆ್ಯಪ್​ ಸೇರಿ ಇನ್ನೂ ಕೆಲವು ಆ್ಯಪ್​ಗಳನ್ನು ಅನ್​ ಇನ್ಸ್ಟಾಲ್​ ಮಾಡಿ, ರಾಷ್ಟ್ರಭಕ್ತಿಗೆ ಜೈ ಎಂದಿದ್ದಾರೆ.

ಆ್ಯಪ್​ ಕಿತ್ತಾಕುವುದರ ಜತೆಗೆ ನೀವೂ ಈ ಕಾರ್ಯಕ್ಕೆ ಮುಂದಾಗಿ. ಈಗಲೇ ಆ್ಯಪ್​ ಸೇರಿ ಚೀನಿ ಉತ್ಪನ್ನಗಳನ್ನು ಕೈ ಬಿಟ್ಟು ಸ್ವದೇಶಿಯತ್ತ ಮುಖ ಮಾಡೋಣ ಎಂಬ ಸಂದೇಶವನ್ನೂ ನೀಡಿದ್ದಾರೆ. ಅಭಿಮಾನಿಗಳ ಈ ಸ್ವಯಂ ಪ್ರೇರಿತ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚಿಗೆ ವ್ಯಕ್ತವಾಗುತ್ತಿದ್ದು, ಒಂದಷ್ಟು ಮಂದಿ ಡಿಲಿಟ್​ ಮಾಡಿರುವ ಸ್ಕ್ರೀನ್​ ಶಾಟ್​ಗಳನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net