ಜನವರಿಯಿಂದ ಶುಗರ್​ ಫ್ಯಾಕ್ಟರಿಗೆ ಹೋಗ್ತಾರಂತೆ ಡಾರ್ಲಿಂಗ್​ ಕೃಷ್ಣ

Krishna
Published on

ಬೆಂಗಳೂರು: ಲವ್​ ಮಾಕ್​ಟೇಲ್​ ಯಶಸ್ವಿಯಾದ ಬಳಿಕ ನಟ ಡಾರ್ಲಿಂಗ್​ ಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಒಂದಾದ ಮೇಲೆ ಒಂದು ಅವರ ಸಿನಿಮಾಗಳು ಸೆಟ್ಟೇರುತ್ತಿವೆ. ಇತ್ತೀಚೆಗಷ್ಟೇ ನಾಗಶೇಖರ್​ ನಿರ್ದೇಶನದ Shrikrishna@gmail.com ಸಿನಿಮಾದ ಶೀರ್ಷಿಕೆ ಘೋಷಣೆ ಆಗಿತ್ತು. ಇದೀಗ ಮತ್ತೊಂದು ಸಿನಿಮಾದ ಶೀರ್ಷಿಕೆ ಘೋಷಣೆ ಆಗಿದೆ. ಅದೇ ಶುಗರ್​ ಫ್ಯಾಕ್ಟರಿ.

ಸದ್ಯ ಲವ್​ಮಾಕ್​ಟೇಲ್​ 2 ಸಿನಿಮಾದ ಕೊನೇ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಕೃಷ್ಣ, ಆ ಬಳಿಕ Shrikrishna@gmail.com ಚಿತ್ರದಲ್ಲಿ ಭಾಗವಹಿಸಲಿದ್ದಾರೆ. ಅದರ ಜತೆಯಲ್ಲಿಯೇ ಶುಗರ್ ಫ್ಯಾಕ್ಟರಿ ಚಿತ್ರದ ಶೂಟಿಂಗ್​ ಮಾಡಿಕೊಳ್ಳಲಿದ್ದಾರೆ.

ಜನವರಿಯಿಂದ ಶುಗರ್​ ಫ್ಯಾಕ್ಟರಿ ಚಿತ್ರದ ಶೂಟಿಂಗ್​ ಶುರುವಾಗಲಿದ್ದು, ದೀಪಿಕ್​ ಅರಸ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ, ನಟಿ ಅಮೂಲ್ಯ ಅವರ ಸಹೋದರನಾಗಿರುವ ದೀಪಕ್​ ಈಗಾಗಲೇ ಮನಸಾಲಜಿ ಎಂಬ ಸಿನಿಮಾ ನಿರ್ಮಿಸಿದ್ದರು. ಇದೀಗ ಶುಗರ್​ ಫ್ಯಾಕ್ಟರಿ ಮೂಲಕ ಮರಳುತ್ತಿದ್ದಾರೆ.

ಮೂವರು ನಾಯಕಿಯರಿರುವ ಈ ಚಿತ್ರದಲ್ಲಿ ಡಾರ್ಲಿಂಗ್​ ಕೃಷ್ಣ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಕಾಮಿಡಿ ರೀತಿಯಲ್ಲಿ ಸಿನಿಮಾ ಸಿದ್ಧವಾಗಲಿದೆ ಎನ್ನಲಾಗುತ್ತಿದೆ. ಕೈಯಲ್ಲಿರುವ ಪ್ರಾಜೆಕ್ಟ್​ಗಳು ಕೊನೇ ಹಂತದಲ್ಲಿದ್ದು, ಅದಾದ ಬಳಿಕ ಈ ಸಿನಿಮಾ ತಂಡ ಸೇರಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net