

| ಹರ್ಷವರ್ಧನ್ ಬ್ಯಾಡನೂರು
ಟಿವಿ ಇತಿಹಾಸದಲ್ಲಿಯೇ ಸುದೀರ್ಘವಾಗಿ ಪ್ರಸಾರವಾದ ಧಾರಾವಾಹಿ ಎಂಬ ಹೆಗ್ಗಳಿಕೆ ‘ಸಿಐಡಿ’ಗೆ ಸಲ್ಲುತ್ತದೆ. 1998ರಿಂದ 2018ರವರೆಗೆ, 21 ವರ್ಷಗಳಲ್ಲಿ ಬರೋಬ್ಬರಿ 1547 ಎಪಿಸೋಡ್‌ಗಳು ಪ್ರಸಾರವಾಗಿದ್ದವು. ಈ ಹಿಂದಿ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು ದಯಾನಂದ್ ಶೆಟ್ಟಿ. ‘ಸಿಐಡಿ’ಯಲ್ಲಿ ಸೀನಿಯರ್ ಇನ್ಸ್‌ಪೆಕ್ಟರ್ ದಯಾ ಪಾತ್ರದಲ್ಲಿ ನಟಿಸಿದ್ದ ಅವರು ಭಾರತದಾದ್ಯಂತ ಮನೆ ಮಾತಾಗಿದ್ದರು. ಮೂಲತಃ ಉಡುಪಿಯ ಶಿರ್ವದವರಾದ ದಯಾನಂದ್ ಇದೀಗ ತುಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು.