ಕಾರ್ ಕಿರಿಕಿರಿ ; ಡಿಕ್ಕಿ ಬಂದ್ ಮಾಡಲು ಪರದಾಡಿದ ಬಾಲಿವುಡ್ ನಟಿ ನುಶ್ರತ್

Nushrat Bharucha (11)
Published on

ಬಾಲಿವುಡ್ ನಟಿ ನುಶ್ರತ್ ಭರೂಚಾ 15 ವರ್ಷಗಳ ಕರಿಯರ್‌ನಲ್ಲಿ 20ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈ ವರ್ಷವೇ ಅವರು ನಟಿಸಿರುವ ‘ಸೆಲ್ಫೀ’, ‘ಛತ್ರಪತಿ’ ಹಾಗೂ ‘ಅಕೇಲಿ’ ಚಿತ್ರಗಳು ಬಿಡುಗಡೆಯಾಗಿದ್ದು, ಸದ್ಯ ‘ಛೋರಿ 2’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.

ಇಂತಹ ನುಶ್ರತ್ ಇತ್ತೀಚೆಗಷ್ಟೆ ಕಾರ್‌ನಿಂದ ಪಜೀತಿ ಎದುರಿಸಿದ್ದಾರೆ. ಕಳೆದ ವರ್ಷವಷ್ಟೇ ಮಹೀಂದ್ರ ಕಾರ್ ಖರೀದಿಸಿದ್ದ ನುಶ್ರತ್, ಕೆಲ ದಿನಗಳ ಹಿಂದೆ ಬಿಎಂಡಬ್ಲೂೃ ಐಎಕ್ಸ್ ಲಕ್ಷುರಿ ಇವಿ ಎಸ್‌ಯುವಿ ಖರೀದಿಸಿದ್ದಾರೆ. ಇದರ ಬೆಲೆ 1.30 ಕೋಟಿ ರೂ. ಎನ್ನಲಾಗಿದೆ.

ಶುಕ್ರವಾರ (ಸೆ. 15) ಹೊಸ ಬಿಎಂಡಬ್ಲೂೃ ಕಾರಿನಲ್ಲಿ ಸಹೋದರಿ, ತಾಯಿ ಜತೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಡಿಕ್ಕಿಯಿಂದ ಲಗೇಜ್ ತೆಗೆದುಕೊಂಡಿದ್ದಾರೆ. ಬಳಿಕ ಡಿಕ್ಕಿ ಬಂದ್ ಮಾಡಲು ನಾಲ್ಕೈದು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಫ್ಲೈಟ್​ಗೆ ತಡವಾಗುತ್ತದೆ ಎಂದು ನಗುತ್ತಾ ಅಲ್ಲಿಂದ ಟರ್ಮಿನಲ್‌ನತ್ತ ಹೊರಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net