'ಲಿಯೋ'ದಲ್ಲಿ ನಟಿಸಲು ನನಗೆ ಅವಕಾಶವಿತ್ತು ಆದ್ರೆ…: ನಟ ವಿಶಾಲ್

Untitled design - 2023-09-15T121227.788
Published on

ತಮಿಳುನಾಡು: 'ಪಾಂಡಿಯಾ ನಾಡು' ಖ್ಯಾತಿಯ ನಟ ವಿಶಾಲ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಮಾರ್ಕ್​ ಆಂಟೋನಿ' ಇಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಈ ಮಧ್ಯೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟ, 'ಲಿಯೋ' ಚಿತ್ರದಲ್ಲಿ ತನಗೊಂದು ಪಾತ್ರವಿತ್ತು. ಅದನ್ನು ಯಾಕೆ ಮಾಡಲಾಗಲಿಲ್ಲ ಎಂಬುದಕ್ಕೆ ಸೂಕ್ತ ಕಾರಣವೊಂದನ್ನು ನೀಡಿದ್ದಾರೆ.

"ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ದಳಪತಿ ವಿಜಯ್​ ಇಬ್ಬರು ನನ್ನ ಆತ್ಮೀಯರು. ಇವರಿಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ 'ಲಿಯೋ' ಚಿತ್ರದಲ್ಲಿ ನಟಿಸಲು ನನಗೊಂದು ಅವಕಾಶ ಒದಗಿತ್ತು. ಆದ್ರೆ, ದುರದೃಷ್ಟವಶಾತ್ ನಾನು 'ಮಾರ್ಕ್ ಆಂಟೋನಿ' ಮತ್ತು 'ತುಪ್ಪರಿವಾಲನ್ 2' ಸಿನಿಮಾಗಳ ಕೆಲಸಗಳಿಂದ ಆ ಅವಕಾಶವನ್ನು ಕೈಬಿಡಬೇಕಾಯಿತು" ಎಂದು ಹೇಳಿದರು.

"ದಳಪತಿ ವಿಜಯ್ ನನ್ನ ನೆಚ್ಚಿನ ನಟ, ಅವರ ಸಿನಿಮಾವನ್ನು ನೀವು ನಿರ್ದೇಶನ ಮಾಡುತ್ತಿದ್ದೀರಿ, ನಿಜಕ್ಕೂ ನೀವು ಲಕ್ಕಿ" ಎಂದು ವಿಶಾಲ್​ ನಿರ್ದೇಶಕ ಲೋಕೇಶ್​ ಕನಕರಾಜ್​ ಅವರಿಗೆ ಹೇಳಿದರು. ಸದ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿರುವ 'ಮಾರ್ಕ್​ ಆಂಟೋನಿ', ಬಾಕ್ಸ್ ಆಫೀಸ್​ನಲ್ಲಿ ಯಾವ ರೀತಿ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net