More

    ​SuperWin ಜತೆ ಕೈಜೋಡಿಸಿದ ಎಬಿ ಡಿವಿಲಿಯರ್ಸ್​, ಪೂಜಾ ಹೆಗ್ಡೆ​: ಆನ್​ಲೈನ್​​ ಗೇಮಿಂಗ್​ ವೇದಿಕೆಗೆ ಸಿಕ್ತು ಬಲ

    ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹಾಗೂ ಬಹುಭಾಷ ನಟಿ ಪೂಜಾ ಹೆಗ್ಡೆ​ ಅವರು ಆನ್​ಲೈನ್​ ಗೇಮಿಂಗ್​ ಕ್ಷೇತ್ರ ಸೂಪರ್​ವಿನ್ (​SuperWin) ಪ್ರವೇಶಿಸಿದ ಹೊಸ ಮುಖಗಳಾಗಿವೆ. ಈ ದೊಡ್ಡ ಪಾಲುದಾರಿಕೆಯು ಕಳೆದ ತಿಂಗಳ ಆರಂಭದಲ್ಲಿ ಪ್ರಾರಂಭವಾದ ಸೂಪರ್​ವಿನ್​ನ ಮೊದಲ ಪರಿಪೂರ್ಣ ಹೆಜ್ಜೆಯಾಗಿದೆ.

    ಜನರು ಕ್ರೀಡೆಯನ್ನು ಆನಂದಿಸುವ ರೀತಿಯಲ್ಲಿ ಆನ್‌ಲೈನ್ ಗೇಮಿಂಗ್ ತ್ವರಿತವಾಗಿ ಜನರ ಅವಿಭಾಜ್ಯ ಅಂಗವಾಗುತ್ತಿದ್ದು, ವಿಶ್ವದಾದ್ಯಂತ ತನ್ನ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದೆ. ಈ ಗೇಮಿಂಗ್​ನಿಂದಾಗಿ ಕ್ರೀಡಾಭಿಮಾನಿಗಳು ಈಗ ಕ್ರೀಡಾಂಗಣದ ಸ್ಟ್ಯಾಂಡ್‌ನಲ್ಲಿ ಕುಳಿತುಕೊಳ್ಳುವ ಮೂಕ ಪ್ರೇಕ್ಷಕರಾಗುವುದಕ್ಕಿಂತ ಮೈದಾನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಿಜವಾದ ಪಾಲುದಾರರಂತೆ ಭಾವಿಸಬಹುದಾಗಿದೆ.

    ಎಬಿ ಡಿವಿಲಿಯರ್ಸ್​ ಒರ್ವ ದಿಗ್ಗಜ ಕ್ರಿಕೆಟಿಗ. ತಮ್ಮ ವಿಭಿನ್ನ ಬ್ಯಾಟಿಂಗ್​ ಶೈಲಿಯಿಂದಾಗಿ ವಿಶ್ವದಲ್ಲಿ ಮಿಸ್ಟರ್​ 360 ಡಿಗ್ರಿ ಎಂದೇ ಖ್ಯಾತಿಯಾಗಿದ್ದಾರೆ. ಸೂಪರ್​ವಿನ್​ ಜತೆಗಿನ ಅವರ ಪಾಲುದಾರಿಕೆಯಿಂದ ಸಂತಸಗೊಂಡಿರುವ ಎಬಿಡಿ, ಭಾರತದಲ್ಲಿ ಈ ಬ್ರ್ಯಾಂಡ್​ ಅನ್ನು ಪ್ರಚಾರ ಮಾಡಲು ತುದಿಗಾಲಲ್ಲಿ ಎದುರು ನೋಡುತ್ತಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಡಿವಿಲಿಯರ್ಸ್ ಚಾಂಪಿಯನ್​ ಎಂಬುದು ಎಲ್ಲರಿಗೂ ತಿಳಿದಿದೆ. 2004 ರಿಂದ 2018ರವರೆಗೆ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜನರ ಮನಗೆದ್ದಿರುವ ಎಬಿಡಿ, ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಬಹುಬೇಡಿಕೆಯ ಸ್ಟಾರ್​ ಆಗಿದ್ದರು. ಅದರಲ್ಲೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರ ಆಡಿರುವ ಎಬಿಡಿ ಅನೇಕ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿದ್ದಾರೆ. ವಿಶೇಷವಾಗಿ ಕೊಹ್ಲಿ ಜತೆಗಿನ ಅವರ ಸ್ನೇಹ ಮತ್ತು ತಂಡದ ಸಹ ಆಟಗಾರರ ಜತೆಗಿನ ಅವರ ಬಾಂದವ್ಯ ಮೆರೆಯುವ ಆಗಿಲ್ಲ. ಆರ್​ಸಿಬಿ ಅಭಿಮಾನಿಗಳ ಮನ ಗೆದ್ದಿರುವ ಎಬಿಡಿ, ಇಂದಿಗೂ ಕನ್ನಡಿಗರ ಮನದಲ್ಲಿ ನೆಲೆಸಿದ್ದಾರೆ. ಈ ಕಾರಣಕ್ಕೆ ಬೆಂಗಳೂರಿನ ರಸ್ತೆಯೊಂದಕ್ಕೆ ಅವರ ಹೆಸರನ್ನು ಇಡುವಂತೆ ಸಾಕಷ್ಟು ಒತ್ತಾಯಗಳು ಸಹ ಕೇಳಿಬಂದವು. ಇನ್ನು ಎಬಿಡಿಗೂ ಬೆಂಗಳೂರೆಂದರೆ ತುಂಬಾ ಇಷ್ಟ. ಇದನ್ನು ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

    ಸೂಪರ್​ವಿನ್​ ಜತೆಗಿನ ಪಾಲುದಾರಿಕೆಯ ಬಗ್ಗೆ ಮಾತನಾಡಿರುವ ಎಬಿಡಿ, ಗೆಲ್ಲುವುದು ಆಟದ ಭಾಗವಾಗಿದ್ದು, ನಾವೆಲ್ಲರೂ ವೃತ್ತಿಪರ ಕ್ರೀಡಾಪಟುಗಳು ಮತ್ತು ನಮಗೆ ನಮ್ಮದೇಯಾದ ರೀತಿಯಲ್ಲಿ ಇರಲು ಬಯಸುವವರು ಕೂಡ. ಸೂಪರ್‌ವಿನ್‌ನೊಂದಿಗೆ ಒಡನಾಡಲು ನನಗೆ ನಿಜವಾಗಿಯೂ ಸಂತೋಷವಾಗಿದೆ. ಏಕೆಂದರೆ ಅವರು ಕ್ರೀಡೆಯಲ್ಲಿ ಮೋಜು ಮಾಡುವ, ಕ್ರೀಡಾ ಸಮುದಾಯದಲ್ಲಿ ಒಳಗೊಳ್ಳುವ ಮತ್ತು ಅಂತಿಮವಾಗಿ ದೊಡ್ಡದನ್ನು ಗೆಲ್ಲುವ ಬಯಕೆಯನ್ನು ಸೇರಿದಂತೆ ಎಲ್ಲವನ್ನೂ ಸಾಧಿಸುತ್ತಾರೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದಿದ್ದಾರೆ.

    ಇನ್ನೂ ಪೂಜಾ ಹೆಗ್ಡೆ ಬಗ್ಗೆ ಹೇಳುವುದಾದರೆ, ಅವರು ಉತ್ತಮ ನಟನೆ ಮತ್ತು ಬ್ಲಾಕ್​ ಬಸ್ಟರ್​ ಸಿನಿಮಾಗಳಿಂದ ದಕ್ಷಿಣ ಮಾತ್ರವಲ್ಲದೆ ಇಡೀ ದೇಶದಲ್ಲಿ ತಮ್ಮದೇಯಾದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಪ್ರಸ್ತುತ ಸಿನಿಮಾ ರಂಗದ ಬಹುಬೇಡಿಕೆಯ ಸ್ಟಾರ್​ ನಟಿಯರಲ್ಲಿ ಪೂಜಾ ಕೂಡ ಮುಂಚೂಣಿಯಲ್ಲಿದ್ದಾರೆ. ಅಲಾ ವೈಕುಂಠಪುರಮುಲೂ (2020) ಮತ್ತು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ (2021) ಚಿತ್ರದಲ್ಲಿನ ಅಭಿನಯಕ್ಕಾಗಿ ತೆಲುಗು ಚಿತ್ರರಂದ ಅತ್ಯುತ್ತಮ ನಟಿಗಾಗಿ SIIMA ಪ್ರಶಸ್ತಿಯನ್ನು ಗೆದ್ದಿದ್ದಾರೆ. ಒಕಾ ಲೈಲಾ ಕೋಸಂ, ಅಲಾ ವೈಕುಂಠಪುರಮುಲು ಮತ್ತು ಅರವಿಂದ ಸಮೇತ, ವೀರ ರಾಘವ (2018) ಸಿನಿಮಾದಲ್ಲಿನ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಇಷ್ಟೇ ಅಲ್ಲದೆ, ದುವ್ವಾಡ ಜಗನ್ನಾಥಂ (2017), ಮಹರ್ಷಿ (2019), ಗದ್ದಲಕೊಂಡ ಗಣೇಶ್ (2019), ಹೌಸ್‌ಫುಲ್ 4 (2019), ಸರ್ಕಸ್ (2022), ಕಿಸಿ ಕಾ ಭಾಯ್ ಕಿಸಿ ಕಾ ಜಾನ್ (2023) ಸಿನಿಮಾಗಳಲ್ಲಿಯೂ ತಮ್ಮ ಚಾಪು ಮೂಡಿಸಿದ್ದಾರೆ. ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಮತ್ತು ಇಂದಿಗೂ ಅನೇಕ ಆಫರ್​ಗಳ ಅವರನ್ನು ಹುಡುಕಿಕೊಂಡು ಬರುತ್ತಿವೆ.

    ಸೂಪರ್​ವಿನ್​ ಜತೆಗಿನ ಪಾಲುದಾರಿಕೆಯ ಬಗ್ಗೆ ಮಾತನಾಡಿರುವ ಪೂಜಾ ಹೆಗ್ಡೆ, ಸೂಪರ್​ವಿನ್​ ತರುವ ಹೊಸತನವನ್ನು ನೋಡಲು ನಾನು ಉತ್ಸುಕಳಾಗಿದ್ದೇನೆ. ಸೂಪರ್‌ವಿನ್ ಕುಟುಂಬದ ಭಾಗವಾಗಲು ಸ್ಪೂರ್ತಿದಾಯಕವಾಗಿದೆ ಮತ್ತು ಕ್ರೀಡೆಗಳನ್ನು ತುಂಬಾ ಸಂವಾದಾತ್ಮಕವಾಗಿಸುವ ರೋಮಾಂಚಕ ಸಮುದಾಯದ ಭಾಗವಾಗಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

    ಸೂಪರ್​ವಿನ್​ ಕುರಿತು

    ಸೂಪರ್​ವಿನ್​ 2023ರಲ್ಲಿ ಆರಂಭವಾಯಿತು. ಇದು ಕ್ರೀಡೆ ಮತ್ತು ಗೇಮಿಂಗ್ ವಿನಿಮಯವನ್ನು ಒದಗಿಸುತ್ತದೆ ಮತ್ತು ಯಾವುದೇ ಷರತ್ತುಗಳನ್ನು ಅನ್ವಯಿಸದ ಸೈನ್ ಅಪ್ ಬೋನಸ್‌ನಿಂದ ಬಳಕೆದಾರರಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಇದರಲ್ಲಿ ನೋಂದಾಯಿಸಿದ ತಕ್ಷಣ ಬಳಕೆದಾರರ ವ್ಯಾಲೆಟ್‌ನಲ್ಲಿ 1000 ರೂ. ಜಮೆಯಾಗುತ್ತದೆ. ಸೂಪರ್​ವಿನ್​ ಠೇವಣಿ ಬೋನಸ್ ಅನ್ನು ಸಹ ನೀಡುತ್ತದೆ. ಇದು ಮೊದಲ ಠೇವಣಿಯ ಮೇಲೆ 350% ಮತ್ತು ಎರಡನೆಯದರಲ್ಲಿ 50% ಆಗಿರುತ್ತದೆ ಮತ್ತು ತಕ್ಷಣವೇ ಹಣ ಕ್ರೆಡಿಟ್ ಆಗುತ್ತದೆ. ಇಂದಿನ ಡಿಜಿಟಲ್ ಯುಗವು ಅನೇಕ ಉದ್ಯಮಗಳನ್ನು ಕ್ರಾಂತಿಗೊಳಿಸಿದೆ ಮತ್ತು ಆನ್‌ಲೈನ್ ಗೇಮಿಂಗ್ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ. ಸೂಪರ್‌ವಿನ್‌ನಂತಹ ಪ್ಲಾಟ್‌ಫಾರ್ಮ್‌ಗಳು ಮುನ್ನಡೆಸುವುದರೊಂದಿಗೆ, ಆಟಗಾರರು ತಲ್ಲೀನಗೊಳಿಸುವ ಅನುಭವಗಳು, ಉತ್ತಮ-ಗುಣಮಟ್ಟದ ಗ್ರಾಫಿಕ್ಸ್ ಮತ್ತು ತಡೆರಹಿತ ಆಟದ ಪ್ರದರ್ಶನವನ್ನು ನಿರೀಕ್ಷಿಸಬಹುದಾಗಿದೆ.

    ಕ್ರೀಡೆಯ ಉತ್ಸಾಹವನ್ನು ಸಂಭ್ರಮಿಸಲು ಎಬಿಡಿ ಮತ್ತು ಪೂಜಾ ಹೆಗ್ಡೆ ಅವರೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ ಮತ್ತು ಅವರೊಂದಿಗೆ ಯಶಸ್ವಿ ಒಡನಾಟವನ್ನು ನಾವು ಎದುರು ನೋಡುತ್ತಿದ್ದೇವೆ. ಭಾರತೀಯ ಪ್ರಾಬಲ್ಯದ ಜಾಗತಿಕ ವೇದಿಕೆಯಾಗಿ ಬೆಳೆಯುವ ಬಹುದೊಡ್ಡ ಯೋಜನೆಯಲ್ಲಿ ಎಬಿಡಿ ಮತ್ತು ಪೂಜಾ ಅವರು ನಮ್ಮ ಬ್ರ್ಯಾಂಡ್‌ಗೆ ಮೌಲ್ಯವನ್ನು ಸೇರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಸೂಪರ್​ವಿನ್​ ವಕ್ತಾರರು ತಿಳಿಸಿದ್ದಾರೆ.

    ಅಂದಹಾಗೆ SuperWin ಅತ್ಯಾಧುನಿಕ ಗೇಮಿಂಗ್ ಅನುಭವವನ್ನು ಒದಗಿಸುತ್ತದೆ. ಹೀಗಾಗಿ www.SuperWin.co ನಲ್ಲಿ ಆನ್‌ಲೈನ್ ಗೇಮಿಂಗ್ ಜಗತ್ತನ್ನು ನೀವು ಅನ್ವೇಷಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts