More

    ತೆಲುಗಿನಲ್ಲಿ ರಿಲೀಸ್​ ಆಗಲಿದೆ ರಕ್ಷಿತ್​ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’

    ಆಂಧ್ರಪ್ರದೇಶ: ಕಳೆದ ಕೆಲ ವಾರಗಳ ಹಿಂದೆಯಷ್ಟೇ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ ಆದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವು ಸಿನಿಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಜತೆಗೆ ಉತ್ತಮ ಪ್ರದರ್ಶನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಸಿನಿಮಾದ ತೆಲುಗು ಆವೃತ್ತಿ ಶೀಘ್ರವೇ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೀಗ ಅಧಿಕೃತವಾಗಿ ಪ್ರಕಟಗೊಂಡಿದೆ.

    ಇದನ್ನೂ ಓದಿ: ನಮ್ಮನ್ನು ಹಿಂದಿಯಲ್ಲಿ ಮಾತಾಡಿ ಅಂತ ಒತ್ತಾಯಿಸ್ತೀರಿ, ಯಾಕಂದ್ರೆ ನಿಮಗೆ ಹಿಂದಿ ಮಾತ್ರ ಗೊತ್ತು ಎಂದ ನಟ ಪ್ರಕಾಶ್​ ರಾಜ್​

    ಸ್ಯಾಂಡಲ್​ವುಡ್​ನ ಸಿಂಪಲ್ ಸ್ಟಾರ್​, ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್​ ಮುಖ್ಯಭೂಮಿಕೆಯಲ್ಲಿ ಅಭಿನಯದ ಚಿತ್ರಕ್ಕೆ ಕನ್ನಡ ಸಿನಿಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ದೊರಕಿತು. ಸದ್ಯ ಈ ಸಿನಿಮಾದ ತೆಲುಗು ಆವೃತ್ತಿಯನ್ನು ಪವನ್​ ಕಲ್ಯಾಣ್​ ನಟನೆಯ ‘ಬ್ರೋ’ ಚಿತ್ರವನ್ನು ನಿರ್ಮಿಸಿದ ಪೀಪಲ್ ಮೀಡಿಯಾ ಫ್ಯಾಕ್ಟರಿ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್​ ಎ ಭಾಗದ ಬಿಡುಗಡೆ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದೆ.

    ಹೇಮಂತ್ ಎಂ. ರಾವ್ ನಿರ್ದೇಶನದ ಈ ಸಿನಿಮಾವನ್ನು ತೆಲುಗು ಪ್ರೇಕ್ಷಕರ ಮುಂದಿಡಲು ಪೀಪಲ್ ಮೀಡಿಯಾ ಫ್ಯಾಕ್ಟರಿ ಸಜ್ಜಾಗಿದ್ದು, ಶೀಘ್ರವೇ ಚಿತ್ರದ ತೆಲುಗಿನ ಟೈಟಲ್​ ಮತ್ತು ರಿಲೀಸ್​ ದಿನಾಂಕದ ಮಾಹಿತಿ ಹೊರಬೀಳಲಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಜೆ. ಆಚಾರ್, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಸೇರಿದಂತೆ ಮುಂತಾದವರ ತಾರಗಣವಿದೆ,(ಏಜೆನ್ಸೀಸ್).

    ಮಹಿಳೆಯರಿಗೆ ಮಾಸಿಕ 1 ಸಾವಿರ ರೂ. ನೀಡುವ ಯೋಜನೆ ಪ್ರಾರಂಭಿಸಿದ ತಮಿಳುನಾಡು ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts