More

    ಮಹಿಳೆಯರಿಗೆ ಮಾಸಿಕ 1 ಸಾವಿರ ರೂ. ನೀಡುವ ಯೋಜನೆ ಪ್ರಾರಂಭಿಸಿದ ತಮಿಳುನಾಡು ಸರ್ಕಾರ

    ತಮಿಳುನಾಡು: ಡಿಎಂಕೆ ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಅವರ ಜನ್ಮದಿನದ ಅಂಗವಾಗಿ ರಾಜ್ಯದ ಪ್ರತಿ ಮಹಿಳಾ ಕುಟುಂಬದ ಮುಖ್ಯಸ್ಥರಿಗೆ ಮಾಸಿಕ 1 ಸಾವಿರ ರೂ. ಆರ್ಥಿಕ ನೆರವು ಯೋಜನೆಯನ್ನು ಇದೀಗ ತಮಿಳುನಾಡು ಸರ್ಕಾರ ನೂತನವಾಗಿ ಪ್ರಾರಂಭಿಸಿದೆ.

    ಇದನ್ನೂ ಓದಿ: Fish oils Benefits: ನಿಮಗೆ ಮೀನಿನ ಎಣ್ಣೆಯ ಬಗ್ಗೆ ತಿಳಿದಿದೆಯೇ? ಅದರ ಅದ್ಭುತ ಪ್ರಯೋಜನಗಳು ಇಲ್ಲಿವೆ…

    ಕುಟುಂಬದ ಅರ್ಹ ಮಹಿಳಾ ಮುಖ್ಯಸ್ಥರು ಕಲೈಂಜರ್ ಮಗಳಿರ್ ಉರಿಮೈ ತಿಟ್ಟಂ ಅಥವಾ ಕಲೈಂಜರ್ ಮಹಿಳಾ ಹಕ್ಕು ಯೋಜನೆ ಅಡಿಯಲ್ಲಿ ತಿಂಗಳಿಗೆ 1,000 ರೂ.ಗಳನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಪಡೆಯಲಿದ್ದಾರೆ. ಈ ಯೋಜನೆಯನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಸಿಎನ್ ಅಣ್ಣಾದೊರೈ ಅವರ ಜನ್ಮಸ್ಥಳವಾದ ಕಾಂಚೀಪುರಂನಲ್ಲಿ ಪ್ರಾರಂಭಿಸಿದ್ದಾರೆ.

    ಈ ಯೋಜನೆಯು ಡಿಎಂಕೆಯ ಅತಿದೊಡ್ಡ ಚುನಾವಣಾ ಭರವಸೆಗಳಲ್ಲಿ ಒಂದಾಗಿದ್ದು, 2023 ರಲ್ಲಿ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಈ ಯೋಜನೆಗೆ 7,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇದು ತಮಿಳುನಾಡು ಸರ್ಕಾರದ ಅತಿ ಹೆಚ್ಚು ವೆಚ್ಚದ ಸಮಾಜ ಕಲ್ಯಾಣ ಯೋಜನೆ ಎಂದು ಹೇಳಲಾಗಿದೆ.

    ರಾಜ್ಯ ಸರ್ಕಾರದ ಪ್ರಕಾರ, ಈ ಯೋಜನೆಗಾಗಿ 1.63 ಕೋಟಿ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಪರಿಶೀಲನೆಯ ನಂತರ, ಅರ್ಹತಾ ಮಾನದಂಡಗಳ ಆಧಾರದ ಮೇಲೆ 1.06 ಕೋಟಿ ಮಹಿಳೆಯರನ್ನು ಪಟ್ಟಿ ಮಾಡಲಾಗಿದೆ. 1000 ರೂ. ಪಡೆಯಲು ಘೋಷಿಸಿರುವ ಅರ್ಹತೆಯ ಮಾನದಂಡ ಈ ಕೆಳಕಂಡಂತಿದೆ.

    ಇದನ್ನೂ ಓದಿ: ಅರ್ಚಕರಾಗಲು ಯಶಸ್ವಿ ತರಬೇತಿ ಪೂರ್ಣಗೊಳಿಸಿದ ಮೂವರು ಯುವತಿಯರು; ಶೀಘ್ರವೇ ನೇಮಕ

    ಅರ್ಹತೆಯ ಮಾನದಂಡ:

    • 21 ವರ್ಷ ವಯಸ್ಸಿನ (ಸೆಪ್ಟೆಂಬರ್ 15, 2002 ಕ್ಕಿಂತ ಮೊದಲು ಜನಿಸಿದವರು) ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
    • ಆಕೆಯ ಕುಟುಂಬದ ಆದಾಯ ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
    • ಫಲಾನುಭವಿಯ ಕುಟುಂಬವು 5 ಎಕರೆಗಿಂತ ಹೆಚ್ಚಿನ ಆರ್ದ್ರ ಭೂಮಿ ಅಥವಾ 10 ಎಕರೆ ಒಣ ಭೂಮಿಯನ್ನು ಹೊಂದಿರುವಂತಿಲ್ಲ.
    • ಮಹಿಳೆಯ ವಾರ್ಷಿಕ ಗೃಹ ವಿದ್ಯುತ್ ಬಳಕೆ 3600 ಯೂನಿಟ್ ಮೀರಬಾರದು ಎಂದು ನಮೂದಿಸಲಾಗಿದೆ, (ಏಜೆನ್ಸೀಸ್).

    ನಮ್ಮನ್ನು ಹಿಂದಿಯಲ್ಲಿ ಮಾತಾಡಿ ಅಂತ ಒತ್ತಾಯಿಸ್ತೀರಿ, ಯಾಕಂದ್ರೆ ನಿಮಗೆ ಹಿಂದಿ ಮಾತ್ರ ಗೊತ್ತು ಎಂದ ನಟ ಪ್ರಕಾಶ್​ ರಾಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts