More

    Fish oils Benefits: ನಿಮಗೆ ಮೀನಿನ ಎಣ್ಣೆಯ ಬಗ್ಗೆ ತಿಳಿದಿದೆಯೇ? ಅದರ ಅದ್ಭುತ ಪ್ರಯೋಜನಗಳು ಇಲ್ಲಿವೆ…

    ಫಿಶ್​ ಆಯಿಲ್​ ಅಂದರೆ ಮೀನಿನ ಎಣ್ಣೆಯ ಬಗ್ಗೆ ನೀವು ಕೇಳಿದ್ದೀರಾ? ಇದನ್ನು ಹೇಗೆ ಮಾಡುತ್ತಾರೆ ಗೊತ್ತಾ? ಮೀನಿನಂತೆಯೇ ಮೀನಿನ ಎಣ್ಣೆಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ನಮ್ಮ ದೇಹವು ಆರೋಗ್ಯವಾಗಿರಲು ಅನೇಕ ಪೋಷಕಾಂಶಗಳ ಅಗತ್ಯವಿದೆ. ಅವುಗಳಲ್ಲಿ ಪ್ರಮುಖವಾದವು ಒಮೆಗಾ 3 ಕೊಬ್ಬಿನಾಮ್ಲಗಳು.

    ಹಲವು ಸಮಸ್ಯೆಗಳಿಗೆ ರಾಮಬಾಣ

    ಒಮೆಗಾ 3 ಕೊಬ್ಬಿನಾಮ್ಲಗಳಿಂದಾಗಿ ನಮ್ಮ ದೇಹದಲ್ಲಿರುವ ಜೀವಕೋಶಗಳು ಸದಾ ಆರೋಗ್ಯಕರವಾಗಿರುತ್ತವೆ ಮತ್ತು ತಮ್ಮ ಕೆಲಸವನ್ನು ಚೆನ್ನಾಗಿ ಮಾಡುತ್ತವೆ. ಈ ಒಮೆಗಾ 3 ಕೊಬ್ಬಿನಾಮ್ಲವು ಹೃದಯ ಸಮಸ್ಯೆಗಳು, ರಕ್ತ ಹೆಪ್ಪುಗಟ್ಟುವಿಕೆ, ಸ್ತನ ಕ್ಯಾನ್ಸರ್ ಮತ್ತು ಮರೆವು ಸೇರಿದಂತೆ ಅನೇಕ ಕಾಯಿಲೆಗಳನ್ನು ತಡೆಯುತ್ತದೆ. ಜೀವಕೋಶಗಳು ಸರಿಯಾಗಿ ಕೆಲಸ ಮಾಡಿದರೆ, ನಮ್ಮ ದೇಹದ ಪ್ರತಿಯೊಂದು ವ್ಯವಸ್ಥೆಯೂ ಸರಿಯಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಒಮೆಗಾ 3 ಕೊಬ್ಬಿನಾಮ್ಲಗಳು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ.

    ವಾರಕ್ಕೆ 2 ಬಾರಿಯಾದ್ರೂ ಮೀನು ತಿನ್ನಿ

    ಈ ಒಮೆಗಾ 3 ಫ್ಯಾಟಿ ಆ್ಯಸಿಡ್​ ಮೀನಿನಲ್ಲಿ ಕಂಡುಬರುವ ಕೊಬ್ಬಿನಲ್ಲಿ ಹೇರಳವಾಗಿವೆ. ಒಂದಿಷ್ಟನ್ನು ಸಸ್ಯಗಳಿಂದಲೂ ಪಡೆದುಕೊಳ್ಳುತ್ತಾರೆ. ಆದರೆ ಸಸ್ಯಗಳ ಕೊಬ್ಬಿನಾಮ್ಲಗಳಿಗಿಂತ ಮೀನಿನಲ್ಲಿರುವ ಕೊಬ್ಬಿನಾಮ್ಲಗಳು ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಎಂದು ಅಧ್ಯಯನಗಳು ತೋರಿಸಿವೆ. ಅದಕ್ಕಾಗಿಯೇ ವಿಶ್ವ ಆರೋಗ್ಯ ಸಂಸ್ಥೆಯು ವಾರಕ್ಕೆ ಎರಡು ಬಾರಿಯಾದರೂ ಮೀನನ್ನು ತಿನ್ನುವಂತೆ ಶಿಫಾರಸು ಮಾಡುತ್ತದೆ. ಆದರೆ, ಕೆಲವರು ಮೀನು ತಿನ್ನಲು ಇಷ್ಟಪಡುವುದಿಲ್ಲ. ಅಂತಹ ಜನರು ಖಂಡಿತವಾಗಿಯೂ ಮೀನಿನ ಎಣ್ಣೆ ಅಥವಾ ಪೂರಕಗಳನ್ನು ಬಳಸಬೇಕು.

    ಇದನ್ನೂ ಓದಿ: ಏಷ್ಯಾಕಪ್​ನಲ್ಲಿ ಇಂದು ಬಾಂಗ್ಲಾ ಸವಾಲು; ಗೆಲುವಿನ ಓಟ ಕಾಯ್ದುಕೊಳ್ಳುವ ಹಂಬಲದಲ್ಲಿ ಭಾರತ

    ಮೀನಿನೆ ಎಣ್ಣೆ ಹೇಗೆ ತಯಾರಿಸುತ್ತಾರೆ? 

    ಮೀನಿನ ಎಣ್ಣೆಯನ್ನು ಹೆಚ್ಚಾಗಿ ಎಣ್ಣೆಯುಕ್ತ ಮೀನಿನ ಅಂಗಾಂಶಗಳು ಮತ್ತು ಯಕೃತ್ತುಗಳಿಂದ ಸಂಗ್ರಹಿಸಲಾಗುತ್ತದೆ. ಹೆರಿಂಗ್, ಟ್ಯೂನಾ, ಕಾಡ್, ಆಂಚೊವಿಸ್, ಮ್ಯಾಕೆರೆಲ್ ಮುಂತಾದ ಸಮುದ್ರ ಮೀನುಗಳಲ್ಲಿ ಕೊಬ್ಬಿನಂಶ ಹೆಚ್ಚಾಗಿರುತ್ತದೆ. ಈ ಕೊಬ್ಬುಗಳನ್ನು ಪ್ರತ್ಯೇಕಿಸಿ ಸಂಸ್ಕರಿಸಿದ ನಂತರ ಮೀನಿನ ಎಣ್ಣೆಯನ್ನು ತಯಾರಿಸಲಾಗುತ್ತದೆ. ಮೀನಿನ ಎಣ್ಣೆಯ ಪೂರಕಗಳನ್ನು ತಯಾರಿಸಲು ಇವುಗಳನ್ನು ಸಣ್ಣ ಕ್ಯಾಪ್ಸುಲ್​ಗಳಲ್ಲಿ ತುಂಬಿಸಲಾಗುತ್ತದೆ. ವೈದ್ಯರ ಸಲಹೆಯೊಂದಿಗೆ ನಿಮ್ಮ ದೇಹಕ್ಕೆ ಸೂಕ್ತವಾದ ಪ್ರಮಾಣದಲ್ಲಿ ಇವುಗಳನ್ನು ಬಳಸುವುದು ಉತ್ತಮ.

    ಮೀನಿನ ಎಣ್ಣೆಯಲ್ಲಿ ಏನಿರುತ್ತದೆ?

    ಈ ಮೀನಿನ ಎಣ್ಣೆಯಲ್ಲಿ 30 ಪ್ರತಿಶತದಷ್ಟು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಉಳಿದ 70 ಪ್ರತಿಶತ ಇತರ ಕೊಬ್ಬುಗಳು, ವಿಟಮಿನ್ ಎ ಮತ್ತು ವಿಟಮಿನ್ ಡಿ ಅನ್ನು ಹೊಂದಿರುತ್ತದೆ. (ಏಜೆನ್ಸೀಸ್​)

    ಗಣೇಶ ಹಬ್ಬ ಆಚರಣೆ ಎಂದು?

    ಯೋಧರ ಸಾವಿನ ನಡುವೆಯೂ ಮೋದಿ ಸಂಭ್ರಮಕ್ಕೆ ಆಕ್ಷೇಪ; ಆಕ್ರಂದನದ ವಿಡಿಯೋ ಹರಿಬಿಟ್ಟ ಪ್ರತಿಪಕ್ಷಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts