More

    ಅರ್ಚಕರಾಗಲು ಯಶಸ್ವಿ ತರಬೇತಿ ಪೂರ್ಣಗೊಳಿಸಿದ ಮೂವರು ಯುವತಿಯರು; ಶೀಘ್ರವೇ ನೇಮಕ

    ತಮಿಳುನಾಡು: ಪ್ರಥಮ ಬಾರಿಗೆ ಮೂವರು ಯುವತಿಯರು ದೇವಸ್ಥಾನದ ಅರ್ಚಕರಾಗಲು ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ರಾಜ್ಯದ ದೇವಾಲಯಗಳಲ್ಲಿ ಸಹಾಯಕ ಅರ್ಚಕರಾಗಿ ನೇಮಕಗೊಳ್ಳಲ್ಲಿದ್ದಾರೆ.

    ಇದನ್ನೂ ಓದಿ: ಯೋಧರ ಸಾವಿನ ನಡುವೆಯೂ ಮೋದಿ ಸಂಭ್ರಮಕ್ಕೆ ಆಕ್ಷೇಪ; ಆಕ್ರಂದನದ ವಿಡಿಯೋ ಹರಿಬಿಟ್ಟ ಪ್ರತಿಪಕ್ಷಗಳು

    ಕೃಷ್ಣವೇಣಿ, ಎಸ್. ರಮ್ಯಾ ಮತ್ತು ಎನ್. ರಂಜಿತಾ ಎಂಬ ಮೂವರು ಯುವತಿಯರನ್ನು ತಮಿಳುನಾಡು ಸರ್ಕಾರದ ಅಡಿಯಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ನಿರ್ವಹಿಸುವ ದೇವಾಲಯಗಳಲ್ಲಿ ಸಹಾಯಕ ಅರ್ಚಕರಾಗಿ ನೇಮಕ ಮಾಡಲಾಗುವುದು ಎಂದು ವರದಿ ಉಲ್ಲೇಖಿಸಿದೆ.

    ಶ್ರೀರಂಗಂನ ಶ್ರೀ ರಂಗನಾಥರ ದೇವಸ್ಥಾನದ ಅರ್ಚಕರ ತರಬೇತಿಯಲ್ಲಿ ಕೋರ್ಸ್ ಪೂರ್ಣಗೊಳಿಸಿದ ಪುರುಷ ಪ್ರಶಿಕ್ಷಣಾರ್ಥಿಗಳೊಂದಿಗೆ ಈ ಮೂವರು ಮಹಿಳೆಯರಿಗೆ ತಮಿಳುನಾಡು ಸಚಿವ ಸೇಕರ್ ಬಾಬು ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು. 2021 ರಲ್ಲಿ ಡಿಎಂಕೆ ಸರ್ಕಾರದ ಅಧಿಕಾರಾವಧಿಯಲ್ಲಿ, ಎಲ್ಲಾ ವರ್ಗಗಳ ಜನರಿಗೆ ಅರ್ಚಕ ತರಬೇತಿ ನೀಡುವ ಉಪಕ್ರಮವನ್ನು ಘೋಷಿಸಿದ್ದರು.

    ಇದನ್ನೂ ಓದಿ:  ಸಂಶೋಧನಾ ಅಧ್ಯಯನಕ್ಕಾಗಿ ತೈವಾನ್‌ಗೆ ಮೂವರು ವಿದ್ಯಾರ್ಥಿಗಳು

    ಈ ವೇಳೆ ಆಸಕ್ತಿ ಇರುವ ಮಹಿಳೆಯರಿಗೂ ಕೂಡ ಅದೇ ತರಬೇತಿಯನ್ನು ನೀಡಲಾಗುವುದು ಎಂದು ಹೇಳಿದ್ದರು. ಈ ಘೋಷಣೆಯ ಬೆನ್ನಲ್ಲೇ ಕಾರ್ಯಕ್ರಮಕ್ಕೆ ಸೇರಲು ನಿರ್ಧರಿಸಿದ್ದ ಕೃಷ್ಣವೇಣಿ, ಎಸ್.ರಮ್ಯಾ, ಮತ್ತು ಎನ್.ರಂಜಿತಾ ತಾವು ಬಯಸಿದಂತೆ, ಅರ್ಚಕರಾಗಲು ಇಂದು ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ,(ಏಜೆನ್ಸೀಸ್).

    ಈ ದಿನ ರಿಲೀಸ್​ ಆಗಲಿದೆ ನಾನಿ-ಮೃಣಾಲ್​ ಠಾಕೂರ್​ ನಟನೆಯ ‘ಹಾಯ್​ ನನ್ನಾ’?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts