ಈ ದಿನ ರಿಲೀಸ್​ ಆಗಲಿದೆ ನಾನಿ-ಮೃಣಾಲ್​ ಠಾಕೂರ್​ ನಟನೆಯ 'ಹಾಯ್​ ನನ್ನಾ'?

Untitled design - 2023-09-14T202825.838
Published on

ಆಂಧ್ರಪ್ರದೇಶ: ಟಾಲಿವುಡ್​ನ ನ್ಯಾಚುರಲ್ ಸ್ಟಾರ್ ನಾನಿ ಮತ್ತು 'ಸೀತಾ ರಾಮಂ' ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಅಭಿನಯದ ಬಹುನಿರೀಕ್ಷಿತ 'ಹಾಯ್ ನನ್ನಾ' ಸಿನಿಮಾ ಕುರಿತು ಇದೀಗ ಹೊಸ ಅಪ್ಡೇಟ್​ವೊಂದು ಲಭಿಸಿದೆ.

ಶೌರ್ಯುವ್ ಅವರ ಚೊಚ್ಚಲ ನಿರ್ದೇಶನದ ಭಾವನಾತ್ಮಕ ಪ್ರೇಮಕಥೆಯ 'ಹಾಯ್ ನನ್ನಾ' ಚಿತ್ರದ ಮೊದಲ ಸಿಂಗಲ್ ಸಮಯಮಾ ಇದೇ ಸೆಪ್ಟೆಂಬರ್ 16 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೊಸ ಪೋಸ್ಟರ್​ ರಿಲೀಸ್​ ಮಾಡುವ ಮುಖೇನ ಅಧಿಕೃತವಾಗಿ ಘೋಷಿಸಿದೆ.

ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿರುವ ಪ್ಯಾನ್ ಇಂಡಿಯಾ ಚಿತ್ರದ ಬಗ್ಗೆ ಇದೀಗ ಭಾರೀ ಕುತೂಹಲ ವ್ಯಕ್ತಪಡಿಸಿರುವ ನಾನಿ ಫ್ಯಾನ್ಸ್​, ಸಿನಿಮಾದ ಹೊಸ ಮಾಹಿತಿಗಳಾಗಿ ಕಾತರದಿಂದ ಕಾಯುತ್ತಿದ್ದಾರೆ.

ಪ್ರಸ್ತುತ ಸಿನಿಮಾವು ನಿರ್ಮಾಣ ಹಂತದಲ್ಲಿದ್ದು, ವೈರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದು, ಸಿನಿಮಾ ಡಿಸೆಂಬರ್​ 21, 2023 ರಂದು ಬಿಡುಗಡೆಯಾಗಲಿದೆ. ಈ ಬಗ್ಗೆ ಚಿತ್ರ ತಯಾರಕರು ಘೋಷಿಸಲಿರುವ ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net