More

    VIDEO| ಫುಟ್ಬಾಲ್​ ಪಂದ್ಯದ ವೇಳೆ ರೆಫ್ರಿ ತಪ್ಪು ನಿರ್ಧಾರ; ಮುಂದೇನಾಯ್ತು ಗೊತ್ತಾ?

    ತ್ರಿಪುರಾ: ಫುಟ್ಬಾಲ್​ ಒಂದು ಸುಂದರವಾದ ಆಟವಾಗಿದ್ದು, ಈ ಕ್ರೀಡಾ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿದೆ. ಕೆಲವೊಮ್ಮೆ ಆಟವಾಡುವ ವೇಳೆ ಆಟಗಾರರ ನಡುವಿನ ವಾಗ್ವಾದ, ಅಂಪೈರ್​ಗಳ ಕೆಟ್ಟ ನಿರ್ಧಾರದಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮೈದಾನದಲ್ಲೇ ಹೊಡೆದಾಟವಾಗುವ ಸಂಭವವಿರುತ್ತದೆ.

    ಇದೀಗ ಘಟನೆಯೊಂದರಲ್ಲಿ ರೆಫ್ರಿ ಹಾಗು ಆಟಗಾರರ ನಡುವೆ ಪಂದ್ಯದ ವೇಳೆ ಗಲಾಟೆಯಾಗಿರುವ ಘಟನೆ ತ್ರಿಪುರಾದ ಸ್ಟೇಟ್​ ಲೀಗ್​ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧ ವ್ಯಕ್ತವಾಗುತ್ತಿದೆ.

    ವೈರಲ್​ ಆಗಿರುವ ವಿಡಿಯೋದಲ್ಲಿ ರೆಫ್ರಿ ಒಬ್ಬರು ನೀಡಿದ ತೀರ್ಪಿಗೆ ಆಟಗಾರರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಈ ವೇಳೆ ಆಟಗಾರರು ಏಕಾಏಕಿ ರೆಫ್ರಿ ಮೇಲೆ ದಾಳಿ ಮಾಡಿದ್ದು, ಮೈದಾನದಲ್ಲಿದ್ದವರು ಜಗಳ ಬಿಡಿಸಿದ್ದಾರೆ. ಈ ವೇಳೆ ರೆಫ್ರಿ ಆಟಗಾರರ ಮೇಲೆ ತಿರುಗಿಸಿ ಹಲ್ಲೆ ಮಾಡಿದ್ದು, ವಾಗ್ವಾದ ನಡೆದಿದೆ. ಈ ಕುರಿತು ರೆಫ್ರಿ ಹಾಗೂ ಆಟಗಾರರ ಮೇಲೆ ಫುಟ್​ಬಾಲ್​ ಅಸೋಸಿಯೇಷನ್​​ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.

    ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು, ಕೆಲವರು ಅಂಪೈರ್​ ತೀರ್ಪನ್ನು ಗೌರವಿಸಬೇಕು ಯಾರು ಸಹ ಸುಮ್ಮನೆ ಇನ್ನೊಬ್ಬರ ತಪ್ಪನ್ನು ಎತ್ತಿ ತೋರಿಸುವುದಿಲ್ಲ ಎಂದು ಹೇಳಿದ್ದಾರೆ. ಕೆಲವರು ರೆಫ್ರಿ ನಡೆದುಕೊಂಡ ರೀತಿಯನ್ನು ಖಂಡಿಸಿದ್ದು, ಅವರು ಗೂಂಡಾ ರೀತಿ ವರ್ತಿಸಿರುವುದು ಖಂಡನೀಯ ಎಂದು ಕಿಡಿಕಾರಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts