More

    ಮುಂಬೈ ವಿಮಾನ ನಿಲ್ದಾಣದ ರನ್​ವೇನಲ್ಲಿ ಸ್ಕಿಡ್​ ಆದ ಖಾಸಗಿ​ ವಿಮಾನ; ಮೂವರಿಗೆ ಗಾಯ

    ಮುಂಬೈ: ಖಾಸಗಿ ವಿಮಾನವೊಂದು ರನ್​ವೇನಲ್ಲಿ ಸ್ಕಿಡ್​ ಆದ ಪರಿಣಾಮ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈನ ಛತ್ರಪತಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸಿಬ್ಬಂದಿ ಸೇರಿದಂತೆ ಒಟ್ಟು ಎಂಟು ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

    ವಿಶಾಖಪಟ್ಟಣಂನಿಂದ ಮುಂಬೈನತ್ತ ಬರುತ್ತಿದ್ದ VSR ವೆಂಚರ್ಸ್ ಲಿಯರ್‌ಜೆಟ್ 45 ವಿಮಾನ VT-DBL ವಿಮಾನವು ಛತ್ರಪತಿ ವಿಮಾನ ನಿಲ್ದಾಣ ರನ್​ವೇ 27ನಲ್ಲಿ ಲ್ಯಾಂಡಿಂಗ್​ ಆಗುವ ವೇಳೆ ಸ್ಕಿಡ್​​ ಆದ ಪರಿಣಾಮ ಅವಘಡ ಸಂಭವಿಸಿದೆ.

    ಈ ಕುರಿತು ಪ್ರಕಟಣೆ ಹೊರಡಿಸಿರುವ ಡಿಜಿಸಿಎ ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಸೇರಿದಂತೆ ಎಂಟು ಮಂದಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಶಾಖಪಟ್ಟಣಂನಿಂದ ಮುಂಬೈನತ್ತ ಬರುತ್ತಿದ್ದ VSR ವೆಂಚರ್ಸ್ ಲಿಯರ್‌ಜೆಟ್ 45 ವಿಮಾನ VT-DBL ವಿಮಾನವು ಲ್ಯಾಂಡಿಂಗ್​ ಆಗುವ ವೇಳೆ ಮಳೆ ಸುರಿಯುತ್ತಿದ್ದ ಕಾರಣ ಸ್ಕಿಡ್​​ ಆಗಿ ಅವಘಡ ಸಂಭವಿಸಿದೆ ಎಂದು ಡಿಜಿಸಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts