ಬಿಜೆಪಿಯ ನಾಲ್ವರು ಬೆಂಬಲಿಗರು ಆತ್ಮಹತ್ಯೆ! ಚುನಾವಣೆಯಲ್ಲಿ ಸೋತ ಮಹಿಳಾ ಅಭ್ಯರ್ಥಿ ಹೇಳಿದ್ದೇನು?

oankaja
Published on

ಮುಂಬೈ: ಮಹಾರಾಷ್ಟ್ರದ ಬೀಡ್‌ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ನಾಯಕಿ ಪಂಕಜಾಮುಂಡೆ ಸೋತ ನಂತರ ಅವರ ನಾಲ್ವರು ಬೆಂಬಲಿಗರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಂಕಜಾ ಮುಂಡೆ ಅವರ ದೃಢ ಬೆಂಬಲಿಗ ಲಾತೂರ್ ನಿವಾಸಿ ಸಚಿನ್ ಮುಂಡೆ ಜೂನ್ 7 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಜೂನ್ 9 ರಂದು ಬೀಡಿನ ಅಂಬಾಜೋಗೈಯಲ್ಲಿ ಪಾಂಡುರಂಗ ಸೋನವಾನೆ ಆತ್ಮಹತ್ಯೆಗೆ ಶರಣಾದರು. ನಂತರ ಜೂನ್ 10 ರಂದು ಬೀಡಿನ ಅಸ್ತಿಯ ಪೋಪಟ್ ವೈಭಾಸೆ, ಜೂನ್ 16 ರಂದು ಗಣೇಶ್ ಬೇಡ ಎಂಬಾತ ಶಿರೂರು ಕಾಸರದ ಗದ್ದೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೂನ್ 16 ರಂದು ಪಂಕಜಾ ಮುಂಡೆ ಮೃತರ ಕುಟುಂಬಗಳನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಅವರು ಕಣ್ಣೀರು ಹಾಕಿದರು. ಅಷ್ಟೇ ಅಲ್ಲ, ಯಾರೂ ಸಹ ಪ್ರಾಣ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net