

ಪ್ರಭಾಸ್ - ಪ್ರಶಾಂತ್ ನೀಲ್ ಜೋಡಿಯ ಸಿನಿಮಅ ಸಲಾರ್, ಇದೇ ತಿಂಗಳ 28ಕ್ಕೆ ಪ್ರೇಕ್ಷಕರ ಮುಂದೆ ಬರಬೇಕಿತ್ತು, ಆದರೆ ಚಿತ್ರತಂಡ ಅದನ್ನು ಮುಂದೂಡಿದೆ. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಥಿಯೇಟರ್ ಗಳಲ್ಲಿ ಸಲಾರ್ ಸದ್ದು ಮಾಡಲಿದೆ ಎಂಬ ಮಾತು ಸಿನಿ ವಲಯದಲ್ಲಿ ಕೇಳಿ ಬರುತ್ತಿದೆ. ಸಲಾರ್ ಚಿತ್ರ ರಿಲೀಸ್ ಮುಂದೂಡಿಕೆಯಾಗಿದ್ದರಿಂದ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಈಗಾಗಲೇ ರೂ.350 ಕೋಟಿ ವ್ಯವಹಾರ ನಡೆದಿರುವುದು ಗೊತ್ತಾಗಿದೆ. ಸ್ಯಾಟಲೈಟ್ ಹಕ್ಕುಗಳನ್ನು ಸ್ಟಾರ್ ನೆಟ್‌ವರ್ಕ್ ಮತ್ತು OTT ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದಿವೆ. ಟೀಸರ್ ಬಿಡುಗಡೆಯಾದಾಗಿನಿಂದ ಸಲಾರ್ ಮೇಲೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ. ಈ ಸಿನಿಮಾದ ನಾನ್ ಥಿಯೇಟ್ರಿಕಲ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.
ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಸಲಾರ್ ಚಿತ್ರ ಎರಡು ಭಾಗಗಳಲ್ಲಿ ತಯಾರಾಗುತ್ತಿರುವುದು ಗೊತ್ತೇ ಇದೆ.
ಈ ವರ್ಷ ಬರುತ್ತಿರುವ ದೊಡ್ಡ ಚಿತ್ರಗಳಲ್ಲಿ ಸಲಾರ್ ಕೂಡ ಒಂದು. 1980 ಬ್ಯಾಕ್ ಡ್ರಾಪ್ ಸಿನಿಮಾದ ಕಥೆ ಸಾಗುತ್ತಿದೆಯಂತೆ. ಸುಣ್ಣದ ಕಲ್ಲು ಮಾಫಿಯಾ ಹಿನ್ನಲೆಯಲ್ಲಿ ಅದ್ಧೂರಿ ಸಾಹಸ ದೃಶ್ಯಗಳು ಇರಲಿದೆ ಎನ್ನಲಾಗಿದೆ.