ಚಿಕ್ಕ ವಯಸ್ಸಿಗೇ ಚೆಫ್​ ಆದ್ರು ಗೋಲ್ಡನ್​ ಸ್ಟಾರ್​ ಗಣೇಶ್​ ಮಗಳು; ಈ ಕ್ಯೂಟ್​ ವಿಡಿಯೋಗೆ ನೀವು ಫಿದಾ ಆಗೋದು ಗ್ಯಾರಂಟಿ

GANESH
Published on

ಬೆಂಗಳೂರು: ಸ್ಟಾರ್​ ನಟ ನಟಿಯರ ಮಕ್ಕಳು ಹುಟ್ಟಿನಿಂದಲೇ ಸುದ್ದಿ ಮಾಧ್ಯಮಕ್ಕೆ ಬರುವಂತವರು. ಅವರು ಏನೇ ಮಾಡಿದರೂ ಅದೊಂದು ಸುದ್ದಿಯೇ. ಅಂತದರಲ್ಲಿ ನಮ್ಮ ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಮಗಳು ತಮ್ಮಚಿಕ್ಕ ವಯಸ್ಸಿಗೇ ಚೆಫ್​ ಆಗಿ ಬದಲಾಗಿಬಿಟ್ಟಿದ್ದಾರೆ. ಮಗಳು ಅಡುಗೆ ಮಾಡುವ ವಿಡಿಯೋವನ್ನು ಗಣೇಶ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗಣೇಶ್​ ಅವರ ಮಗಳು ಚರಿತ್ರಿಯಾ ಅಡುಗೆ ಮನೆಯಲ್ಲಿ ಏನೋ ಖಾದ್ಯ ತಯಾರಿಸುತ್ತಿದ್ದಾರೆ. ಅದರ ಬಗ್ಗೆ ಇಂಗ್ಲಿಷ್​ನಲ್ಲಿ ಒಂದಿಷ್ಟು ವಿಶ್ಲೇಷಣೆಯನ್ನೂ ಕೊಡುತ್ತಾರೆ. ಮೊದಲು ನೋಡುವವರಿಗೆ ಇದ್ಯಾರೋ ಯೂಟ್ಯೂಬ್​ ಇನ್​ಫ್ಲೂಯೆನ್ಸರ್​ ಇರಬಹುದು ಎನ್ನುವಷ್ಟರ ಮಟ್ಟಿಗಿದೆ ಈ ವಿಡಿಯೋ. ಮಗಳ ಇಂಗ್ಲಿಷ್​ ವ್ಯಾಖ್ಯಾನ ಮುಗಿದ ಮೇಲೆ ಗಣೇಶ್​, 'ಮಗಳೇ, ಕರೆಕ್ಟಾಗಿ ಹೇಳು ಏನು ಮಾಡ್ತಿದ್ದೀಯ' ಅಂತ ಕೇಳುತ್ತಾರೆ. ಆಗ ಆಮ್ಲೆಟ್​ ಮಾಡುತ್ತಿರುವುದಾಗಿ ಚರಿತ್ರಿಯಾ ತಿಳಿಸುತ್ತಾರೆ.

ಈ ವಿಡಿಯೋದಲ್ಲಿ ಇನ್ನೋರ್ವ ವಿಶೇಷ ವ್ಯಕ್ತಿಯೂ ಆಗಾಗ್ಗೆ ಕಾಣಿಸಿಕೊಂಡಿದ್ದಾರೆ. ಗಣೇಶ್​ ಅವರ ಮಗ ವಿಹಾನ್​ ವಿಡಿಯೋಕ್ಕೆ ಡಿಸ್ಟರ್ಬ್​ ಮಾಡುವ ಸಲುವಾಗಿ ಮಧ್ಯೆ ಮಧ್ಯೆ ಮಾತನಾಡಿದ್ದಾರೆ. ಮಕ್ಕಳ ಜತೆಗಿನ ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ಗಣೇಶ್​ ಇದೆಲ್ಲ ಯೂಟ್ಯೂಬ್​ ಪ್ರಭಾವ ಎಂದು ಹೇಳಿದ್ದಾರೆ. ಪುಟಾಣಿ ಚರಿತ್ರಿಯಾ ಅವರ ಆಮ್ಲೆಟ್​, ಗಣೇಶ್​ ಅವರ ಸ್ಮೈಲ್​ ಮತ್ತು ವಿಹಾನ್​ ಅವರ ಮುಗ್ಧ ಮಾತು ನಿಮ್ಮನ್ನು ಸೂರೆಗೊಳ್ಳುವುದು ಗ್ಯಾರಂಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net