ವಸಿಷ್ಠ ಸಿಂಹ ಹೆಸರಿನಲ್ಲೊಂದು ಕ್ಯಾಲೆಂಡರ್​

Vaishta Sima - Calendar - Final
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಟ ಎಂದರೆ ಅದು ವಸಿಷ್ಠ ಸಿಂಹ. 'ಟಗರು' ಚಿತ್ರದಲ್ಲಿನ 'ಚಿಟ್ಟೆ' ಪಾತ್ರದ ಮೂಲಕ ಸಖತ್​ ಫೇಮಸ್​ ಆಗಿರುವ ವಸಿಷ್ಠ ಸಿಂಹಗೆ ಇದೀಗ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಈ ಪೈಕಿ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಟೌನ್​ನ ವಸಿಷ್ಠ ಸಿಂಹ ಅವರ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ 2021ರ ಕ್ಯಾಲೆಂಡರ್​ ಹೊರತಂದಿದ್ದಾರೆ. ಪುಟಕ್ಕೊಂದರಂತೆ, 12 ಪುಟಗಳಲ್ಲಿ ವಸಿಷ್ಠ ಸಿಂಹ ಅವರ ಹಲವು ವಿಭಿನ್ನ ಫೋಟೋಗಳಿವೆ.

ಈ ಕ್ಯಾಲೆಂಡರ್​ನ್ನು ಸ್ವತಃ ವಸಿಷ್ಠ ಸಿಂಹ ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಏರ್​ಪೋರ್ಟ್​​ನಲ್ಲಿ ವಸಿಷ್ಠ ಸಿಂಹ ಬಾಯ್ಸ್​ ಸಂಘದ ಸದಸ್ಯರನ್ನು ಭೇಟಿ ಮಾಡಿರುವ ಅವರು, ಅಲ್ಲೇ ಕ್ಯಾಲೆಂಡರ್​ ಲೋಕಾರ್ಪಣೆ ಮಾಡಿದ್ದಾರೆ.

ಕನ್ನಡದ ಹಲವು ನಟರ ಕ್ಯಾಲೆಂಡರ್​ ಇದುವರೆಗೂ ಬಿಡುಗಡೆಯಾಗಿದ್ದು, ಆ ಸಾಲಿಗೆ ಇದೀಗ ವಸಿಷ್ಠ ಸಹ ಸೇರ್ಪಡೆಯಾಗಿದ್ದಾರೆ. ಡಾ. ರಾಜಕುಮಾರ್, ಶಿವರಾಜಕುಮಾರ್​, ವಿಷ್ಣುವರ್ಧನ್​ ಅವರ ಹೆಸರಿನಲ್ಲಿ ಅವರ ಅಭಿಮಾನಿಗಳು ಪ್ರತೀ ವರ್ಷ ಒಂದೊಂದು ಕ್ಯಾಲೆಂಡರ್​ ಹೊರತರುತ್ತಿದ್ದು, ಈ ಬಾರಿ ಸಹಡಾ. ರಾಜಕುಮಾರ್​ ಮತ್ತು ವಿಷ್ಣುವರ್ಧನ್​ ಅವರ ಕ್ಯಾಲೆಂಡರ್​ಗಳನ್ನು ಹೊರತರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net