ಕಿರುಚಿತ್ರ ಮಾಡುವ ಆಸೆ ಇದೆಯಾ? ಬಾಲಿವುಡ್ ನಟ ಸುನೀಲ್​ ಶೆಟ್ಟಿ ಕೊಡ್ತಿದ್ದಾರೆ ಅವಕಾಶ..

Sunil-Shetty-600x400
Published on

ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಹುತೇಕರೆಲ್ಲರೂ ಮನೆಯಲ್ಲಿಯೇ ಇರುವುದರಿಂದ ಒಂದಷ್ಟು ಪ್ರತಿಭೆಗಳಿಗೆ ಇದು ತೊಡಕಾಗಿ ಪರಿಣಮಿಸಿದೆ. ಅಂಥ ಪ್ರತಿಭೆಗಳಿಗೆ ಸಾಣೆ ಹಿಡಿಯುವ ಕೆಲಸವನ್ನು ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಮಾಡಲು ಮುಂದೆ ಬಂದಿದ್ದಾರೆ. ಅದಕ್ಕೆ ಬೇಕಾಗಿರುವುದು ಮೊಬೈಲ್​ ಫೋನ್​ ಮತ್ತು ಒಂದಷ್ಟು ಸೃಜನಶೀಲತೆ.

ಹೌದು, ಎಫ್​ಟಿಸಿ ಶಾರ್ಟ್ಸ್​ ಚಾಲೆಂಜ್​ ಆರಂಭಿಸಿರುವ ಸುನೀಲ್​ ಶೆಟ್ಟಿ, ಕಿರುಚಿತ್ರ ಸಿದ್ಧಪಡಿಸಿ ಕಳುಹಿಸುವಂತೆ ಕೋರಿದ್ದಾರೆ. ಹಾಗಂತ ಮನೆಯಿಂದ ಹೊರಬಂದು ಎಲ್ಲೆಂದರಲ್ಲಿ ಚಿತ್ರೀಕರಿಸಿ ಕಳುಹಿಸುವುದಲ್ಲ. ಕಡ್ಡಾಯವಾಗಿ ಮನೆಯಲ್ಲಿಯೇ ಒಳ್ಳೆಯ ಕಾನ್ಸೆಪ್ಟ್ ಆಯ್ದುಕೊಂಡು ಕಿರುಚಿತ್ರವನ್ನು ರೆಡಿ ಮಾಡಿ ಕಳುಹಿಸಬೇಕು. ಅದಕ್ಕೂ ಮೊದಲು www.FTCTalent.com ನಲ್ಲಿ ಲಾಗ್​ ಇನ್ ಆಗಿ ರಿಜಿಸ್ಟರ್​ ಮಾಡಿಸಬೇಕು. ರಿಜಿಸ್ಟರ್ ಆಗುತ್ತಿದ್ದಂತೆ ಕಿರುಚಿತ್ರ ಹೇಗಿರಬೇಕು? ಅದರ ಮಾನದಂಡಗಳೇನು ಎಂಬ ಮಾಹಿತಿಯೂ ಲಭ್ಯವಾಗಲಿದೆ.

ಈ ಕಿರುಚಿತ್ರವನ್ನು ಫೋನ್​ನಲ್ಲೇ ಸೆರೆಹಿಡಿಯಬೇಕು. ಅಷ್ಟೇ ಅಲ್ಲ ನಿಮಗೆ ಲಭ್ಯ ಇರುವ ಸಂಪನ್ಮೂಲ ಬಳಸಿಕೊಂಡು ಎಡಿಟಿಂಗ್​ ಮತ್ತು ಸೌಂಡಿಂಗ್​ ಮಾಡಿಕೊಳ್ಳಬೇಕು. ಕಿರುಚಿತ್ರದಲ್ಲಿ ನೀವು ನಟಿಸಬಹುದು, ಮನೆಯವರನ್ನೂ ಸೇರಿಸಿಕೊಳ್ಳಬಹುದು. ಸಾಕು ಪ್ರಾಣಿಗಳ ಬಳಕೆಗೂ ಇಲ್ಲಿ ಅವಕಾಶ ಇದೆ. ಹೀಗೆ ಆಯ್ದ ಟಾಪ್​ ಮೂರು ಕಿರುಚಿತ್ರಗಳಿಗೆ ದೊಡ್ಡ ಮೊತ್ತವನ್ನು ಬಹುಮಾನದ ರೂಪದಲ್ಲಿ ನೀಡಲಾಗುತ್ತದೆ. ಅಷ್ಟೇ ಅಲ್ಲ ಬೆಸ್ಟ್ ಡೈರೆಕ್ಟರ್​, ಬೆಸ್ಟ್ ಆ್ಯಕ್ಟರ್​, ಬೆಸ್ಟ್ ಸೌಂಡ್​, ಬೆಸ್ಟ್ ಎಡಿಟಿಂಗ್ಗೂ ಬಹುಮಾನವಿದೆ. ಆಯ್ದ ಮೂರು ಕಿರುಚಿತ್ರಗಳು ಟಿವಿ ಅಥವಾ ಓಟಿಟಿ ಫ್ಲಾಟ್​ಫಾರ್ಮ್ ನಲ್ಲಿ ಬಿತ್ತರವಾಗಲಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net