ಹಾಗಾದರೆ, ಯಾವುದು ಆ ಫೋಟೋ ಅಂತೀರಾ?.. ನಟಿ ತಿಲೋತಮಾ ಶೋಮೆ ಅವರು ‘ಮಾನ್ಸೂನ್ ವೆಡ್ಡಿಂಗ್’, ‘ಇಂಗ್ಲಿಷ್ ಮೀಡಿಯಮ್’ ಎಂಬಂತೆ ಹಲವು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದು, ಬಹಳಷ್ಟು ಖ್ಯಾತಿ ಗಳಿಸಿದ್ದಾರೆ. ಜತೆಗೆ, ಇವರು ಬರೋಬ್ಬರಿ 5 ಭಾಷೆಗಳಲ್ಲಿ ಅಂದರೆ ಇಂಗ್ಲಿಷ್, ಹಿಂದಿ, ಬೆಂಗಾಲಿ, ನೇಪಾಳಿ, ಪಂಜಾಬಿ ಭಾಷೆಗಳಲ್ಲಿ ನಟಿಸಿ, ತೆರೆ ಮೇಲೆ ಸಿಕ್ಕಾಪಟ್ಟೆ ಮಿಂಚಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಅವರು 92 ಸಾವಿರ ಅನುಯಾಯಿಗಳನ್ನು ಹೊಂದಿದ್ದಾರೆ. ಹಾಗಾಗಿ, ಅವರು ಹಂಚಿಕೊಂಡ ಫೋಟೋದಲ್ಲಿ ಕಂಕುಳ ಕೂದಲು ಕಾಣಿಸಿರುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.