ಹೌದು, ಈ ಹಿಂದೆ ಸಿನಿಮಾ ಒಂದಕ್ಕೆ ಕಾಸ್ಟ್ಯೂಂ ಖರೀದಿಸಲು ಅಂತ ಹೀಗೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ನಲ್ಲಿ ಬಟ್ಟೆ ಅಂಗಡಿಗಳಲ್ಲಿ ಅಡ್ಡಾಡಿದರು. ಆದರೆ, ಈ ಬಾರಿ ನಮ್ಮ ಡಿಂಪಲ್ ಕ್ವೀನ್ ಮುಖಕ್ಕೆ ಬಟ್ಟೆಕಟ್ಟಿಕೊಂಡು ಶಾಪಿಂಗ್ಗೆ ಹೋಗಿಲ್ಲ. ಬದಲಿಗೆ, ತನ್ನ ಸ್ನೇಹಿತನನ್ನು ಭೇಟಿ ಮಾಡಲು ಹೋಗಿದ್ದಾರೆ. ಅಂದಹಾಗೆ, ನಟಿ ರಚಿತಾ ರಾಮ್ ಆಂಜನೇಯ ಸ್ವಾಮಿಯ ಭಕ್ತರು. ಹಾಗಾಗಿ, ಜನವರಿ 18 ರಂದು, ಅಂದರೆ ಮಂಗಳವಾರ ಬೆಳಗ್ಗೆ ಅವರ ಸ್ನೇಹಿತ ಮತ್ತು ನಿರ್ದೇಶಕರಾದ ಮಯೂರ್ ರಾಘವೇಂದ್ರ ಜೊತೆಗೆ ಬೆಂಗಳೂರಿನಲ್ಲಿನ ಒಂದು ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಂತರ ಅಲ್ಲಿ ಒಂದು ಸೆಲ್ಫಿ ತೆಗೆಸಿಕೊಂಡರು.