ರಿಲೀಸ್​ ಆಯ್ತು ಅಕ್ಷಯ್​ ಕುಮಾರ್ 'ಬೆಲ್​ಬಾಟಂ' ಚಿತ್ರದ ಟೀಸರ್

123
Published on

ಮುಂಬೈ: ಅಕ್ಷಯ್​ ಕುಮಾರ್ ಅವರ ಬೆಲ್​ಬಾಟಂ ಸಿನಿಮಾ ಶೂಟಿಂಗ್​ ಮುಗಿದಿದೆ. ಇತ್ತೀಚೆಗಷ್ಟೇ ಬಿಡುಗಡೆಗೂ ದಿನಾಂಕ ನಿಗದಿಯಾಗಿದೆ. ಇದೀಗ ಸದ್ದಿಲ್ಲದೆ ಚಿತ್ರದ ಕಿರು ಟೀಸರ್​ ಸಹ ಬಿಡುಗಡೆಯಾಗಿದೆ. ಹೌದು, 2021ರ ಏಪ್ರಿಲ್​ 02ರಂದು ಬೆಲ್​ಬಾಟಂ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತೀರ್ಮಾನಿಸಿದ್ದು, ಅಕ್ಷಯ್​ ಕುಮಾರ್​ ಚಿತ್ರದ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಘೋಷಿಸಿದ್ದರು.

ಇದೀಗ ಅಭಿಮಾನಿಗಳಿಗೆ ಅಚ್ಚರಿ ರೀತಿಯಲ್ಲಿ ಟೀಸರ್ ಮೂಲಕ ಉಡುಗೊರೆ ನೀಡಿದ್ದಾರೆ. ಕಿರು ಟೀಸರ್​ನಲ್ಲಿ ಅಕ್ಷಯ್​ ಅವರ ಹಲವು ಅವತಾರಗಳನ್ನು ತೋರಿಸಲಾಗಿದೆ. ಅಂದಹಾಗೆ, 50 ದಿನಗಳ ಅವಧಿಯಲ್ಲಿ ಸ್ಕಾಟ್​ಲೆಂಡ್​ನಲ್ಲಿ ಈ ಚಿತ್ರದ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

‘ಬೆಲ್​ ಬಾಟಮ್​’ ಚಿತ್ರವನ್ನು ರಂಜಿತ್​ ತಿವಾರಿ ನಿರ್ದೇಶಿಸಿದ್ದು, ಪೂಜಾ ಎಂಟರ್​ಟೈನ್​ಮೆಂಟ್​ ಸಂಸ್ಥೆಯಡಿ ವಾಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ರೆಟ್ರೋ ಥ್ರಿಲ್ಲರ್​ ಶೈಲಿಯ ಸಿನಿಮಾ ಆಗಿದ್ದು ಅಕ್ಷಯ್​ ಕುಮಾರ್ ಜತೆಗೆ ವಾಣಿ ಕಪೂರ್​, ಲಾರಾ ದತ್ತ, ಹುಮಾ ಖುರೇಷಿ ಸೇರಿ ಹಲವರು ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net