ಪರಿಸ್ಥಿತಿ ಕೈ ಮೀರಲು ಬಿಡಬಾರದು: ಪ್ರಶಾಂತ್​ ಸಂಬರಗಿಗೆ​ ಕಿಚ್ಚ ಸುದೀಪ್​ ಖಡಕ್​ ವಾರ್ನಿಂಗ್​..!

Sambaragi
Published on

ಬೆಂಗಳೂರು: ಬಿಗ್​ಬಾಸ್​ ಕನ್ನಡ ಸೀಸನ್​ 8ರ ಸ್ಪರ್ಧಿ ಪ್ರಶಾಂತ್​ ಸಂಬರಗಿ ಬಿಗ್​ ಮನೆಯ ಮಹಿಳಾ ಸ್ಪರ್ಧಿಗಳ ಜತೆ ತುಂಬಾ ಸಲುಗೆ ಹೊಂದಿದ್ದಾರೆ. ಯಾವುದೇ ಕಾರಣವಿಲ್ಲದೆ ಸ್ಪರ್ಧಿಗಳನ್ನು ತಬ್ಬಿಕೊಳ್ಳುವುದರಿಂದಲೂ ಪ್ರಶಾಂತ್ ಪ್ರಖ್ಯಾತಿ ಪಡೆದಿದ್ದಾರೆ.​ ಇದು ನಿರೂಪಕ ಕಿಚ್ಚ ಸುದೀಪ್​ ಗಮನಕ್ಕೆ ಬಂದಿದ್ದು, ಭಾನುವಾರ (ಮಾರ್ಚ್​ 14) 'ವಾರದ ಕತೆ ಕಿಚ್ಚನ ಜತೆ' ಎಪಿಸೋಡ್​ ವೇಳೆ ಈ ವಿಚಾರ ಭಾರಿ ಚರ್ಚೆಯಾಗಿದೆ.

ನೀವು ಎಷ್ಟು ಸ್ಪರ್ಧಿಗಳನ್ನು ತಬ್ಬಿಕೊಳ್ತೀರಿ ಎಂದು ಸುದೀಪ್​, ಸಂಬರಗಿ ಅವರಿಗೆ ನೇರವಾಗಿ ಪ್ರಶ್ನೆ ಕೇಳಿದರು. ನಾನು ಎಲ್ಲರನ್ನು ತಬ್ಬಿಕೊಳ್ಳುತ್ತೇನೆ ಎಂಬ ಸಂಬರಗಿ ಉತ್ತರಿಸಿದರು. ನೀವು ಸಹ ಸ್ಪರ್ಧಿಗಳಿಗೆ ಬಲವಾದ ಅಪ್ಪುಗೆ ನೀಡುವುದರಿಂದ ನನಗೇನು ಹೊಟ್ಟೆ ಕಿಚ್ಚು ಇಲ್ಲ. ಆದಾಗ್ಯು ನೀವು ಅವರನ್ನು ತಬ್ಬಿಕೊಳ್ಳುವಾಗ ಮಾತನಾಡುವುದು ಒಂದು ಸಮಸ್ಯೆಯಾಗಿದೆ ಎಂದರು.

ನಿಮ್ಮ ಮೈಕ್​ ಟಚ್​ ಆದಾಗ ನಮಗೇನು ಕೇಳಿಸುವುದಿಲ್ಲ. ನೀವು ಅಪ್ಪುಗೆ ನೀಡಬಹುದು ಆದರೆ, ಮಾತನಾಡಲು ಅನುಮತಿ ನೀಡಿಲ್ಲ. ದೀರ್ಘ ಸಮಯದವರೆಗೆ ತಬ್ಬಿಕೊಳ್ಳಲು ನಮ್ಮಿಂದ ಸಾಧ್ಯವಾಗಿಲ್ಲ. ನಿಮಗೆ ಆ ಪ್ರತಿಭೆ ಇದೆ ಎಂದು ತೋರುತ್ತದೆ. ಆದರೆ, ಬಿಗ್​ಬಾಸ್​ ಮನೆಯೊಳಗೆ ಅಪ್ಪುಗೆಯನ್ನು ನಿಷೇಧಿಸುವ ಪರಿಸ್ಥಿತಿಯನ್ನು ತರಬೇಡಿ ಎಂದು ಸುದೀಪ್​, ಸಂಬರಗಿ ಕಾಲೆಳೆದರು.

ಬಿಗ್ ಬಾಸ್ ಎರಡು ನಿಮಿಷಗಳಿಗಿಂತ ಹೆಚ್ಚು ಕಾಲ ತಬ್ಬಿಕೊಳ್ಳುವುದರ ವಿರುದ್ಧ ಯಾವುದೇ ನಿಯಮಗಳನ್ನು ರೂಪಿಸಿಲ್ಲ. ಕಳೆದ 7 ಸಿಸನ್​ಗಳಲ್ಲಿಯೂ ಸ್ಪರ್ಧಿಗಳು ಪರಸ್ಪರ ಅಪ್ಪಿಕೊಳ್ಳುವುದನ್ನು ನೋಡಿದ್ದೇವೆ. ಆದರೆ, ಪರಿಸ್ಥಿತಿ ಕೈಮೀರಿ ಹೋಗಲು ಬಿಡಬಾರದು. ಹೊಸ ನಿಯಮಗಳನ್ನು ತರಲು ನಾವು ಒತ್ತಾಯಿಸಲ್ಪಡುವ ಮಟ್ಟಕ್ಕೆ ಅದನ್ನು ತರಬಾರದು. ನನಗೆ ಇದು ಇಷ್ಟವೂ ಇಲ್ಲ ಎಂದು ಸುದೀಪ್​ ಪರೋಕ್ಷವಾಗಿ ಸಂಬರಗಿ ಅವರಿಗೆ ಎಚ್ಚರಿಕೆ ನೀಡಿದರು.

ಸುದೀಪ್​ ಅವರ ಈ ಮಾತು ಇತರೆ ಸ್ಪರ್ಧಿಗಳ ಮೆಚ್ಚುಗೆ ಮಾತ್ರವಲ್ಲದೆ, ಪ್ರೇಕ್ಷಕರಿಂದಲೂ ಚಪ್ಪಾಳೆ ಗಿಟ್ಟಿಸಿಕೊಂಡಿತು. ಅಂದಹಾಗೆ ಸಂಬರಗಿ ಅವರು ಸೀಸನ್​ ಆರಂಭವಾದಾಗಿನಿಂದ ಸಾಕಷ್ಟು ಬಾರಿ ವಿನಾಕಾರಣ ಸ್ಪರ್ಧಿಗಳನ್ನು ತಬ್ಬಿಕೊಂಡಿದ್ದಾರೆ. ಜಾಲತಾಣಗಳಲ್ಲಿಯು ಈ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ. ಇದೀಗ ಸುದೀಪ್​ ಈ ವಿಚಾರವನ್ನು ಪ್ರಸ್ತಾಪಿಸಿ ಒಂದು ತಾರ್ಕಿಕ ಅಂತ್ಯವಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net