

ಬೆಂಗಳೂರು: ಚಂದನವನದ ‘ರಾಕಿಂಗ್ ಸ್ಟಾರ್’ ಯಶ್ ಇದೀಗ ಸೋಷಿಯಲ್ ಮೀಡಿಯಾದಲ್ಲಿಯೂ ಹವಾ ಸೃಷ್ಟಿಸುತ್ತಿದ್ದಾರೆ. ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ದಾಖಲೆಯ ಹಿಂಬಾಲಕರನ್ನು ಹೊಂದಿದ ಸ್ಯಾಂಡಲ್ವುಡ್ನ ಮೊದಲ ನಟನಾಗಿ ಹೊರಹೊಮ್ಮಿದ್ದಾರೆ! ‘ಕೆಜಿಎಫ್ -ಚಾಪ್ಟರ್1’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡ ಯಶ್ ಅವರನ್ನು ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 50 ಲಕ್ಷ (5 ಮಿಲಿಯನ್) ಮಂದಿ ಹಿಂಬಾಲಿಸುತ್ತಿದ್ದಾರೆ. ಇಲ್ಲಿಯವರೆಗೂ ಕನ್ನಡದ ನಾಯಕ ನಟರ ಪೈಕಿ ಯಾರೂ ಮಾಡದ ಸಾಧನೆಯನ್ನು ಯಶ್ ಮಾಡಿದ್ದಾರೆ.