ಫೋಟೋಗಳಿಗೆ ಅಶ್ಲೀಲ ಕಾಮೆಂಟ್​ ಮಾಡುವ ನೆಟ್ಟಿಗರ ಬಗ್ಗೆ ನಟಿ ಹನಿ ರೋಸ್​ ಹೇಳಿದ್ದಿಷ್ಟು…

Honey Rose
Published on

ಚೆನ್ನೈ: ಸಹಜ ಸೌಂದರ್ಯದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಮಲಯಾಳಂ ಬ್ಯೂಟಿ ಹನಿ ರೋಸ್​ ಜಾಲತಾಣದಲ್ಲಿನ ಕೆಟ್ಟ ಬೆಳವಣಿಗೆಯನ್ನು ಟೀಕೆ ಮಾಡಿದ್ದಾರೆ. ನಮ್ಮ ಫೋಟೋಗಳನ್ನು ನಮ್ಮ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡರೂ ಅದು ಹೇಗೆ ಕೆಟ್ಟ ಕಾಮೆಂಟ್​ಗಳು ಬರುತ್ತವೆ? ಇದಕ್ಕೆ ನಾವು ಇಡೀ ಸಮಾಜವನ್ನು ದೂಷಿಸಲು ಆಗುವುದಿಲ್ಲ. ಏಕೆಂದರೆ, ಇದು ಕೆಲವೇ ಕೆಲವು ಮಂದಿಯ ಪ್ರವೃತ್ತಿಯಾಗಿದೆ ಎಂದು ಹನಿರೋಸ್​ ಹೇಳಿದ್ದಾರೆ.

ಮಲಯಾಳಂ ಬಿಗ್​ಬಾಸ್​ ಸೀಸನ್​ 5ರ ವಿಜೇತ ಅಖಿಲ್​ ಮಾರರ್​ ಜತೆಗಿನ ಸಂದರ್ಶನದ ವೇಳೆ ಹನಿ ರೋಸ್, ಜಾಲತಾಣ ದುರ್ಬಳಕೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೊಗಸಾಗಿ ಬಳಸುವವರು ಅನೇಕರಿದ್ದಾರೆ. ಅವರು ಅನೇಕ ಪಾಸಿಟಿವ್​ ಎನರ್ಜಿಯನ್ನು ಕ್ರಿಯೇಟ್​ ಮಾಡುತ್ತಾರೆ. ಇದನ್ನು ಹೊರತುಪಡಿಸಿ, ನೆಗೆಟಿವ್​​ ಕಾಮೆಂಟ್​ ಮಾಡುವವರ ಬಗ್ಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಬರುವ ಹೇಳಿಕೆಗಳಲ್ಲಿ ಒಂದನ್ನು ನಾನು ಹೇಳಿರುತ್ತೇನೆ ಅಥವಾ ಇನ್ನೊಂದು ಬೇರೆ ಯಾರೋ ಒಬ್ಬರು ಸೃಷ್ಟಿ ಮಾಡಿರುತ್ತಾರೆ. ಯಾವುದೇ ಹೇಳಿಕೆಯನ್ನು ಬೇರೆಯವರು ಸೃಷ್ಟಿಸಿದ್ದರ ಅದರ ಹಿಂದೆಯು ಒಂದು ಉದ್ದೇಶ ಇರುತ್ತದೆ. ನಾನು ಹೇಳದಿರುವುದನ್ನು ಬೇರೆ ಯಾರಾದರೂ ಹೇಳಿದರೆಂದರೆ ಅದರ ಹಿಂದೆ ಯಾವುದೇ ಒಳ್ಳೆಯ ಉದ್ದೇಶ ಇರುವುದಿಲ್ಲ ಎಂದರ್ಥ. ಅವರು ನನ್ನ ಎಲ್ಲ ಫೋಟೋಗಳನ್ನು ಬಳಸಿದರೆ ಅವರ ಆಸಕ್ತಿ ಏನೆಂದು ನಿಮಗೆ ತಿಳಿಯುತ್ತದೆ ಎಂದು ಹನಿರೋಸ್​ ಮಾರ್ಮಿಕವಾಗಿ ನುಡಿದರು.

ಹಲವು ವರ್ಷಗಳವರೆಗೆ ಮೋಹನ್​ ಲಾಲ್ ಸಹಾಯ ಮಾಡಿದ್ದಾರೆ ಎಂದು ಸುದ್ದಿಯೋದು ಹರಿದಾಡುತ್ತಿದೆ. ಆದರೆ, ಅದು ಆ ರೀತಿಯಲ್ಲ. ನಾನು ಆ ರೀತಿ ಹೇಳಿಯೇ ಇಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದನ್ನು ನಾನೇ ಹೇಳಿದ್ದೇನೆಂದು ಅನೇಕ ನಂಬಿದ್ದಾರೆ. ಆದರೆ, ಇದು ನಿಜವಲ್ಲ ಎಂದು ಹೇಳಲು ನಾನು ಬಯಸುತ್ತೇನೆ. ದೂರು ನೀಡಬಹುದು ಎಂದು ಅನೇಕ ಹೇಳುತ್ತಾರೆ. ಅಲ್ಲದೆ, ಸ್ಕ್ರೀನ್​ಶಾಟ್​ಗಳನ್ನು ನನಗೆ ಕಲುಹಿಸುತ್ತಿದ್ದಾರೆ. ಆದರೆ, ಇದು ನನಗೆ ಮಾನಸಿಕ ಸವಾಲಾಗಿದೆ ಎಂದು ಹೇಳಿದರು.

ಸ್ಕ್ರೀನ್​ ಶಾಟ್​ಗಳನ್ನು ನಾನು ಮೋಹನ್​ ಲಾಲ್​ ಸರ್​ಗೆ ಕಳುಹಿಸಿದಾಗ ಅವರು ಇದಕ್ಕೆಲ್ಲ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಡ, ಇಲ್ಲಿಯೇ ಬಿಟ್ಟು ಬಿಡು ಎಂದು ಹೇಳಿದರು. ಇಂತಹದೆಲ್ಲ ಸಿನಿ ಜಗತ್ತಿನಲ್ಲಿ ಸಾಮಾನ್ಯವಾಗಿದೆ. ಅವರೆಲ್ಲರೂ ಇಂತಹದನ್ನು ಹಲವು ವರ್ಷಗಳಿಂದ ವ್ಯವಹಿಸಿದ್ದಾರೆ. ಹಾಗಾಗಿ ಇದನ್ನು ದೊಡ್ಡ ವಿಷಯವಾಗಿ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ನಾನು ಸಹ ಈ ವಿಚಾರವನ್ನು ಅಲ್ಲಿಗೆ ಬಿಡಿ ಎಂದು ಹೇಳಿದ್ದೆ ಎನ್ನುತ್ತಾರೆ ಹನಿ ರೋಸ್.

ಹನಿ ರೋಸ್​ ಸಿನಿ ಪಯಣ ವಿಚಾರಕ್ಕೆ ಬಂದರೆ, ಮಲಯಾಳಂ ನಟಿ ಹನಿ ರೋಸ್ ಅವರು 2005 ರಲ್ಲಿ 14 ನೇ ವಯಸ್ಸಿನಲ್ಲಿ ಬಾಯ್‌ಫ್ರೆಂಡ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸೌಂಡ್ ಆಫ್ ಬೂಟ್ (2008), ಸಿಂಗಂ ಪುಲಿ (2011), ಉಪ್ಲುಕಂದಮ್ ಬ್ರದರ್ಸ್ ಬ್ಯಾಕ್ ಇನ್ ಆಕ್ಷನ್ (2011), ಅಜಂತಾ (2012), ಹೋಟೆಲ್ ಕ್ಯಾಲಿಫೋರ್ನಿಯಾ (2013), ರಿಂಗ್ ಮಾಸ್ಟರ್ (2014), ಕುಂಬಾಶರಂ (2015), ಚಾಲಕಿಕಾರನ್ ಸಂಗಾತಿ (2018) ) , ಇಟ್ಟಿಮನಿ: ಮೇಡ್ ಇನ್ ಚೀನಾ (2019), ಬಿಗ್ ಬ್ರದರ್ (2020) ಹಾಗೂ ತೆಲುಗಿನ ವೀರಸಿಂಹ ರೆಡ್ಡಿ (2023) ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ರಚೆಲ್ ಹೆಸರಿನ ಪ್ಯಾನ್​ ಇಂಡಿಯಾ​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಆನಂದಿನಿ ಬಾಲಾ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net