ದೇವರು ಏನು ಕೊಟ್ಟಿದ್ದಾನೋ ಅದನ್ನು ಬಿಟ್ಟು ಬೇರೇನೂ ಇಲ್ಲ! ಸೌಂದರ್ಯದ ವದಂತಿಗೆ ಹನಿ ರೋಸ್​ ಸ್ಪಷ್ಟನೆ

Honey Rose
Published on

ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವವರಿಗೆ ಮಲಯಾಳಂ ಬ್ಯೂಟಿ ಹನಿ ರೋಸ್​ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ಹನಿ ರೋಸ್​ ಅವರು ಸಿನಿಮಾಗಳಿಗಿಂತ ಜಾಲತಾಣದಲ್ಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅವರ ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ ಕೆಲ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹನಿ ರೋಸ್​ ಬಿಜಿಯಾಗಿದ್ದಾರೆ.

ತನ್ನ ಸೌಂದರ್ಯದಿಂದಲೇ ಹೆಸರಾಗಿರುವ ಹನಿ ರೋಸ್​ ಬಗ್ಗೆ ವದಂತಿಯೊಂದು ಹರಿದಾಡುತ್ತಿದೆ. ಅದೇನೆಂದರೆ ಹನಿ ರೋಸ್​ ಸೌಂದರ್ಯದಿಂದ ಹಿಂದೆ ಪ್ಲಾಸ್ಟಿಕ್​ ಸರ್ಜರಿಯ ರಹಸ್ಯ ಅಡಗಿದೆ. ಅವರು ಅನೇಕ ಬಾರಿ ಸರ್ಜರಿಗೆ ಒಳಗಾಗಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

Honey Rose 2

ಈ ವದಂತಿ ಹನಿ ರೋಸ್​ವರೆಗೂ ತಲುಪಿದ್ದು, ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ನಾನು ಯಾವುದೇ ಸರ್ಜರಿ ಮಾಡಿಸಿಕೊಂಡಿಲ್ಲ. ದೇವರು ಏನು ಕೊಟ್ಟಿದ್ದಾನೋ ಅದನ್ನು ಬಿಟ್ಟು ಬೇರೇನೂ ಇಲ್ಲ ಎಂದಿದ್ದಾರೆ. ಆದರೆ, ತಮ್ಮ ಸೌಂದರ್ಯವನ್ನು ಕಾಪಾಡಲು ಕೆಲವು ತಂತ್ರಗಳನ್ನು ಅನುಸರಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ.

ಗ್ಲಾಮರ್​​ ಲೋಕದಲ್ಲಿ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕಾಗಿರುವುದು ತುಂಬಾ ಮುಖ್ಯ. ಹೀಗಾಗಿ ನಾನು ಡಯಟ್​ನಲ್ಲಿದ್ದೇನೆ. ಅಲ್ಲದೆ, ಸೌಂದರ್ಯ ಆರೈಕೆಗೆ ಕೆಲವು ಚಿಕಿತ್ಸೆಗಳನ್ನು ಪಡೆದುಕೊಂಡಿದ್ದೇನೆ ಎನ್ನುವ ಮೂಲಕ ಹನಿ ರೋಸ್​ ವದಂತಿಗೆ ತೆರೆ ಎಳೆದರು.

Honey Rose 1

ಹನಿ ರೋಸ್​ ಸಿನಿ ಪಯಣ ವಿಚಾರಕ್ಕೆ ಬಂದರೆ, ಮಲಯಾಳಂ ನಟಿ ಹನಿ ರೋಸ್ ಅವರು 2005 ರಲ್ಲಿ 14 ನೇ ವಯಸ್ಸಿನಲ್ಲಿ ಬಾಯ್‌ಫ್ರೆಂಡ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸೌಂಡ್ ಆಫ್ ಬೂಟ್ (2008), ಸಿಂಗಂ ಪುಲಿ (2011), ಉಪ್ಲುಕಂದಮ್ ಬ್ರದರ್ಸ್ ಬ್ಯಾಕ್ ಇನ್ ಆಕ್ಷನ್ (2011), ಅಜಂತಾ (2012), ಹೋಟೆಲ್ ಕ್ಯಾಲಿಫೋರ್ನಿಯಾ (2013), ರಿಂಗ್ ಮಾಸ್ಟರ್ (2014), ಕುಂಬಾಶರಂ (2015), ಚಾಲಕಿಕಾರನ್ ಸಂಗಾತಿ (2018) ) , ಇಟ್ಟಿಮನಿ: ಮೇಡ್ ಇನ್ ಚೀನಾ (2019), ಬಿಗ್ ಬ್ರದರ್ (2020) ಹಾಗೂ ತೆಲುಗಿನ ವೀರಸಿಂಹ ರೆಡ್ಡಿ (2023) ಸಿನಿಮಾಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net