More

    ಅತ್ತೆ ಮನೆಯ ಹೊಸ್ತಿಲ ಬಳಿ ಕೂತು ಪ್ರತಿಭಟನೆ ನಡೆಸಿದ ಸೊಸೆ, ಯಾತಕ್ಕಾಗಿ ಗೊತ್ತಾ?

    ವಾರಣಾಸಿ: ಇಲ್ಲಿನ ಮಂಡುವಾಡಿಹ್ ಪ್ರದೇಶದ ಕೇಶವ್ ನಗರ ಕಾಲೋನಿಯಲ್ಲಿರುವ ಅತ್ತೆಯ ಮನೆಯ ಗೇಟ್‌ನಲ್ಲಿ ಸೊಸೆ ತನ್ನ ಐದು ವರ್ಷದ ಮಗನೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾಳೆ. ಅತ್ತೆ ಮನೆಯೊಳಗೆ ಪ್ರವೇಶಿಸಲು ಬಿಡುವವರೆಗೂ ಧರಣಿ ಮುಂದುವರಿಸುವುದಾಗಿ ಸೊಸೆ ಹೇಳಿದ್ದಾಳೆ. ಅಷ್ಟೇ ಅಲ್ಲ, ಪ್ರಾಣ ಕಳೆದುಕೊಂಡರೂ ಹೋಗುವುದಿಲ್ಲ ಎಂದು ತಿಳಿಸಿದ್ದಾಳೆ. ಇದೇ ವೇಳೆ ವಿವಾಹಿತ ಮಹಿಳೆಯ ಧರಣಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

    ಮೂಲಗಳ ಪ್ರಕಾರ ಅರ್ಚನಾ ಸಿಂಗ್ ಎಂಬಾಕೆ ಬುಧವಾರ ಮಧ್ಯಾಹ್ನದಿಂದ ಕೇಶವ ನಗರ ಕಾಲೋನಿಯಲ್ಲಿರುವ ಅತ್ತೆಯ ಮನೆಯ ಗೇಟ್‌ ಬಳಿ ಧರಣಿ ಕುಳಿತಿದ್ದಾರೆ. ಜಖಿನಿ ಮೂಲದ ಅರ್ಚನಾ, ಕೇಶವ ನಗರ ಕಾಲೋನಿಯಲ್ಲಿ ನೆಲೆಸಿರುವ ಅಮಿತ್ ಕುಮಾರ್ ಸಿಂಗ್ ಎಂಬಾತನನ್ನು 2014ರಲ್ಲಿ ಮದುವೆಯಾಗಿದ್ದೆ ಎಂದು ಮಂಡುವಾಡಿ ಪೊಲೀಸ್ ಠಾಣೆಯ ಪೊಲೀಸರಿಗೆ ತಿಳಿಸಿದ್ದಾಳೆ.

    ಪ್ರತ್ಯೇಕ ಮನೆಯಲ್ಲಿ ವಾಸ
    ಅರ್ಚನಾ ಸಿಂಗ್ ಎಂಟು ವರ್ಷದ ಮಗಳು ಅವರ ಅತ್ತೆ ಅಂದರೆ ಅಜ್ಜಿಯೊಂದಿಗೆ ವಾಸಿಸುತ್ತಿದ್ದಾಳೆ. ಕಳೆದ ಒಂದೂವರೆ ವರ್ಷದ ಹಿಂದೆ ಅತ್ತೆ ಹಾಗೂ ಪತಿ ಆಕೆಯನ್ನು ಜಖಿನಿಗೆ ವಾಪಸ್ ಕಳುಹಿಸಿದ್ದರು. ಗ್ರಾಮದಲ್ಲಿ ಚಿಕ್ಕ ಮಗುವಿನೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಅರ್ಚನಾ ಸಿಂಗ್ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು.

    ಈ ಕಾರಣದಿಂದ ವಾಪಾಸ್ ಕೇಶವನಗರ ಕಾಲೋನಿಯಲ್ಲಿರುವ ಅತ್ತೆಯ ಮನೆಗೆ ತಂಗಲು ಬಂದ ಆಕೆಯನ್ನು ಮನೆಯೊಳಗೆ ಪ್ರವೇಶಿಸಲು ಬಿಡಲಿಲ್ಲ. ಆಕೆಯ ಪತಿ, ಅತ್ತೆ ಮತ್ತು ಮಾವ ಮನೆಯೊಳಗೆ ಇದ್ದಾರೆ. ಪೊಲೀಸರು ಅರ್ಚನಾಳನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಆಕೆ ಕೇಳಲು ಸಿದ್ಧಳಿರಲಿಲ್ಲ.

    ಈ ಬಗ್ಗೆ ಮಂಡುವಾಡಿ ಪೊಲೀಸ್ ಠಾಣೆಯ ಎಸ್‌ಎಸ್‌ಐ ಸತ್ಯಪ್ರಕಾಶ್ ಯಾದವ್ ಅವರು ಮಹಿಳೆಯ ಮಾವ ಮನೆಯಲ್ಲಿಲ್ಲ. ಪೊಲೀಸರು ನೋಡಿದಾಗ ಮಹಿಳೆಯ ಪತಿಯೂ ಮನೆಯಲ್ಲಿಲ್ಲ. ಮಹಿಳೆಯ ಪತಿ ಗುರುಗ್ರಾಮದಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ಮಹಿಳೆಯ ಅತ್ತೆ ಮಾತ್ರ ಇದ್ದಾರೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಮೊಹರಂಗೆ ಒಂದು ದಿನ ಮುನ್ನ ಗೋಪಾಲ್‌ಗಂಜ್‌ನಲ್ಲಿ ಭಾರಿ ಅವಘಡ; ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶದಿಂದ ಸುಟ್ಟು ಕರಕಲಾದ ಎಂಟು ಮಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts