More

    ಆರಂಭದಲ್ಲೇ ವಿವಾದದ ಸುಳಿಯಲ್ಲಿ ಸಿಲುಕಿದ ಹನಿ ರೋಸ್​ ನಟನೆಯ ಮೊದಲ ಪ್ಯಾನ್​ ಇಂಡಿಯಾ ಸಿನಿಮಾ

    ಚೆನ್ನೈ: ಮಲಯಾಳಂ ಬ್ಯೂಟಿ ಹನಿ ರೋಸ್ ಸಿನಿಮಾಗಳಿಗಿಂತ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹನಿ ರೋಸ್​ ಬಿಜಿಯಾಗಿದ್ದಾರೆ. ಇದೀಗ ಹನಿ ರೋಸ್​ ಹೊಸ ಸಿನಿಮಾವೊಂದನ್ನು ಘೋಷಣೆ ಮಾಡಿದ್ದು, ಆರಂಭದಲ್ಲೇ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ.

    ಇತ್ತೀಚೆಗಷ್ಟೇ ಬಿಡುಗಡೆಯಾಗಿ ಅದ್ಭುತ ಯಶಸ್ಸು ಸಾಧಿಸಿದ ಟಾಲಿವುಡ್​ ಸೂಪರ್​ ಸ್ಟಾರ್​ ಬಾಲಕೃಷ್ಣ ಅಭಿನಯದ ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ಹನಿ ರೋಸ್​ ನಟಿಸಿದರು. ಈ ಚಿತ್ರ 100 ಕೋಟಿ ರೂ. ಕ್ಲಬ್​ ಸೇರಿತು. ತಮ್ಮ ಬೋಲ್ಡ್​ ಪಾತ್ರದ ಮೂಲಕ ಸಿನಿರಸಿಕರ ಮನ ಗೆದ್ದಿರುವ ಹನಿ ರೋಸ್​, ಈ ಸಿನಿಮಾ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ. ಇದೀಗ ಅವರ ಮುಂದಿನ ರಚೆಲ್​ ಸಿನಿಮಾ ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಟೊಮ್ಯಾಟೋ ಕಿವಿಯೋಲೆ ತೊಟ್ಟು ಕಾಣಿಸಿಕೊಂಡ ಉರ್ಫಿ ಜಾವೇದ್; ಸಖತ್​​ ಕಾಸ್ಟ್ಲಿನೀವು ಮೇಡಂ ಎಂದ ಫ್ಯಾನ್ಸ್​​

    ದನದ ಮಾಂಸದ ನಡುವೆ ಹನಿ ರೋಸ್​

    ರಾಚೆಲ್​ ಒಂದು ಪ್ಯಾನ್​ ಇಂಡಿಯಾ ಸಿನಿಮಾ. ಫಸ್ಟ್​ ಲುಕ್​ನಿಂದಲೇ ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ. ಸೌಂದರ್ಯದ ಗಣಿ ಎಣಿಸಿಕೊಂಡಿರುವ ಹನಿ ರೋಸ್​, ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸುತ್ತಲು ನೇತಾಡುತ್ತಿರುವ ದನದ ಮಾಂಸ ಹಾಗೂ ಅದರ ಮಧ್ಯೆ ಕುಳಿತು ಚಾಕು ಹಿಡಿದು ಮಾಂಸವನ್ನು ಕತ್ತರಿಸುತ್ತಿರುವ ದೃಶ್ಯ ಫಸ್ಟ್​ ಲುಕ್​ನಲ್ಲಿದೆ.

    View this post on Instagram

    A post shared by Honey Rose (@honeyroseinsta)

    ನಟಿಸಲು ಉತ್ಸುಕಳಾಗಿದ್ದಾನೆ 

    ಅಬ್ರಿಡ್ ಶೈನ್ ಪ್ರಸ್ತುತಪಡಿಸಿರುವ ನನ್ನ ಮುಂಬರುವ ಚಲನಚಿತ್ರ “ರಾಚೆಲ್”ನ ಫಸ್ಟ್ ಲುಕ್ ಬಿಡುಗಡೆ ಮಾಡಲು ತುಂಬಾ ಸಂತೋಷವಾಗಿದೆ. ಇದು ಆನಂದಿನಿ ಬಾಲಾ ಅವರ ಚೊಚ್ಚಲ ನಿರ್ದೇಶನ. ಈ ಸಿನಿಮಾದಲ್ಲಿ ನಟಿಸಲು ಉತ್ಸುಕಳಾಗಿದ್ದಾನೆ ಎಂದು ಹನಿ ರೋಸ್​ ಹೇಳಿದ್ದಾರೆ. ಆದರೆ, ಈ ಸಿನಿಮಾ ಆರಂಭದಲ್ಲಿ ವಿವಾದಕ್ಕೆ ಗುರಿಯಾಗಿದೆ.

    ಇದನ್ನೂ ಓದಿ: ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಶಾಕ್​ ಕೊಟ್ಟ ರಮ್ಯಾ: 1 ಕೋಟಿ ರೂ. ಪರಿಹಾರಕ್ಕೆ ಒತ್ತಾಯ

    ಏನಿದು ವಿವಾದ?

    ಭಾರತದಲ್ಲಿ ಗೋವಿಗೆ ಮಾತೃ ಸ್ಥಾನ ನೀಡಿರುವುದರಿಂದ ಅನೇಕರು ಹನಿ ರೋಸ್​ ವಿರುದ್ಧ ಕಿಡಿಕಾರುತ್ತಿದ್ದಾರೆ. ಗೋವುಗಳನ್ನು ಕತ್ತರಿಸುವುದು ಮತ್ತು ಮಾಂಸ ಮಾರುವುದನ್ನು ಈ ಸಿನಿಮಾ ಉತ್ತೇಜಿಸುತ್ತಿದೆ. ಈ ಸಿನಿಮಾದಲ್ಲಿ ಬ್ಯಾನ್​ ಮಾಡಿ ಎಂಬ ಒತ್ತಾಯ ಕೇಳಿಬರುತ್ತಿದೆ. ಅನೇಕ ಹಿಂದುಪರ ಸಂಘಟನೆಗಳು ಸಿನಿಮಾದ ಫಸ್ಟ್​ ಲುಕ್​​ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಹನಿ ರೋಸ್​ ವಿಚಾರಕ್ಕೆ ಬಂದರೆ, ಮಲಯಾಳಂ ನಟಿ ಹನಿ ರೋಸ್ ಅವರು 2005 ರಲ್ಲಿ 14 ನೇ ವಯಸ್ಸಿನಲ್ಲಿ ಬಾಯ್‌ಫ್ರೆಂಡ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸೌಂಡ್ ಆಫ್ ಬೂಟ್ (2008), ಸಿಂಗಂ ಪುಲಿ (2011), ಉಪ್ಲುಕಂದಮ್ ಬ್ರದರ್ಸ್ ಬ್ಯಾಕ್ ಇನ್ ಆಕ್ಷನ್ (2011), ಅಜಂತಾ (2012), ಹೋಟೆಲ್ ಕ್ಯಾಲಿಫೋರ್ನಿಯಾ (2013), ರಿಂಗ್ ಮಾಸ್ಟರ್ (2014), ಕುಂಬಾಶರಂ (2015), ಚಾಲಕಿಕಾರನ್ ಸಂಗಾತಿ (2018) ) , ಇಟ್ಟಿಮನಿ: ಮೇಡ್ ಇನ್ ಚೀನಾ (2019), ಬಿಗ್ ಬ್ರದರ್ (2020) ಹಾಗೂ ತೆಲುಗಿನ ವೀರಸಿಂಹ ರೆಡ್ಡಿ (2023) ಸಿನಿಮಾಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

    ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

    ಸೌಂದರ್ಯದ ಗಣಿ ಹನಿ ರೋಸ್​ಗೆ ಸಿನಿಮಾ ಅವಕಾಶಗಳು ಕಡಿಮೆ ಏಕೆ? ಇಲ್ಲಿದೆ ಅಚ್ಚರಿಯ ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts