ಬಾಯ್​ಫ್ರೆಂಡ್​ ಜತೆಗಿರುವಾಗಲೇ ಬೇರೊಬ್ಬನ ಜತೆ ಲಿಪ್​ಲಾಕ್​ ಮಾಡಿದ ಯುವತಿ! ನಂತರ ನಡೆದಿದ್ದಿಷ್ಟು….

Girl Kissing
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಹಾಗೂ ವಿಚಿತ್ರ ಕಾರಣಕ್ಕೆ ನೆಟ್ಟಿಗರ ಗಮನ ಸೆಳೆದು ಕ್ಷಣ ಮಾತ್ರದಲ್ಲಿ ವೈರಲ್​ ಆಗಿಬಿಡುತ್ತವೆ. ಇದೀಗ ಆ ಸಾಲಿಗೆ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.

ವಿಡಿಯೋದಲ್ಲಿ ಏನಿದೆ?

ಪಾರ್ಟಿಯೊಂದರಲ್ಲಿ ತನ್ನ ಬಾಯ್​ಫ್ರೆಂಡ್​ ಜತೆ ಡಿಜೆ ಸೌಂಡ್​ಗೆ ಯುವತಿ ಡಾನ್ಸ್​ ಮಾಡುತ್ತಿರುತ್ತಾಳೆ. ಈ ವೇಳೆ ಹಿಂದಿನಿಂದ ಬರುವ ಯುವಕ, ಯುವತಿಯ ಮುಂದೆ ನಿಂತು ಏನೋ ಹೇಳುತ್ತಾನೆ. ಬಳಿಕ ಇಬ್ಬರು ಪರಸ್ಪರ ಚುಂಬಿಸುತ್ತಾರೆ. ಆದರೆ, ಇಬ್ಬರು ಲಿಪ್​ಲಾಕ್​ ಮಾಡಿರುವುದು ಯುವತಿಯ ಬಾಯ್​ಫ್ರೆಂಡ್​ಗೆ ಗೊತ್ತಾಗುವುದೇ ಇಲ್ಲ. ಇದಿಷ್ಟು ದೃಶ್ಯ ವೈರಲ್​​ ವಿಡಿಯೋದಲ್ಲಿದೆ.

ಈ ವಿಡಿಯೋವನ್ನು @LadyLionSA ಹೆಸರಿನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ. ಅದಕ್ಕೆ "ಸಹೋದರನಿಗೆ ಸಂದರ್ಭದ ಯಾವುದೇ ಅರಿವು ಇರಲಿಲ್ಲ" ಎಂದು ಅಡಿಬರಹವನ್ನು ನೀಡಲಾಗಿದೆ. ಅದರರ್ಥ ಬಾಯ್​ಫ್ರೆಂಡ್​ಗೆ ಅರಿವೇ ಇರಲಿಲ್ಲ ಎಂದು.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋವನ್ನು ಆಗಸ್ಟ್​ 3ರಂದು ಅಪ್​ಲೋಡ್​ ಮಾಡಲಾಗಿದೆ. ಈವರೆಗೂ ಆ ವಿಡಿಯೋ 13. ಮಿಲಿಯನ್​ ವೀಕ್ಷಣೆ ಪಡೆದುಕೊಂಡಿದೆ. ಅಂದರೆ, 1 ಕೋಟಿ 30 ಲಕ್ಷ ಮಂದಿ ಕೇವಲ ಎರಡು ದಿನಗಳಲ್ಲಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಅಲ್ಲಿಗೆ ಈ ಎಷ್ಟರ ಮಟ್ಟಿಗೆ ವೈರಲ್​ ಆಗಿದೆ ಎಂಬುದನ್ನು ನೀವೇ ಊಹಿಸಿ.

13 ಮಿಲಿಯನ್​ ವೀಕ್ಷಣೆ ಮಾತ್ರವಲ್ಲದೆ, 14 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್​ ಮಾಡಿದ್ದಾರೆ, 2 ಸಾವಿರಕ್ಕೂ ಹೆಚ್ಚು ರೀಟ್ವೀಟ್​ ಮಾಡಿದ್ದರೆ, ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಕೋಟ್​ ಮಾಡಿದ್ದಾರೆ. ವಿಡಿಯೋ ನೋಡಿದವರು ಬಗೆ ಬಗೆಯ ಕಾಮೆಂಟ್​ ಹಾಗೂ ಎಮೋಜಿಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net