ವರ್ಷಕ್ಕೆರಡು ಚಿತ್ರ ನಿರ್ಮಿಸಲು ಅಶ್ವಿನಿ ಪುನೀತ್​ ರಾಜಕುಮಾರ್​ ನಿರ್ಧಾರ

Ashwini (1)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಅಶ್ವಿನಿ ಪುನೀತ್​ ರಾಜಕುಮಾರ್​ ಪಿಆರ್​ಕೆ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ನಿರ್ಮಿಸುತ್ತಿರುವ ಒಂಬತ್ತನೇ ಸಿನಿಮಾ "ಆಚಾರ್​ ಆ್ಯಂಡ್​ ಕೋ'. "ಕವಲುದಾರಿ' ಮತ್ತು "ಮಾಯಾಬಜಾರ್​' ಹೊರತುಪಡಿಸಿದರೆ ಉಳಿದ ಆರು ಚಿತ್ರಗಳು ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಗಿದ್ದವು. ಇದೀಗ ಮೂರು ವರ್ಷಗಳ ನಂತರ "ಆಚಾರ್​ ಆ್ಯಂಡ್​ ಕೋ' ಶುಕ್ರವಾರ ತೆರೆಗೆ ಬರಲು ರೆಡಿಯಾಗಿದೆ. ಅದೇ ಖುಷಿಯಲ್ಲಿ ಅಶ್ವಿನಿ ಮುಂದಿನ ಯೋಜನೆಗಳ ಕುರಿತು ಮಾತನಾಡಿದರು.

ಅಪ್ಪು ಒಪ್ಪಿದ್ದ ಎರಡು ಕಥೆಗಳು
ಪುನೀತ್​ ರಾಜಕುಮಾರ್​ ಅವರೇ "ಆಚಾರ್​ ಆ್ಯಂಡ್​ ಕೋ' ಮತ್ತು "ಓ2' ಕಥೆಗಳನ್ನು ಕೇಳಿ, ಒಪ್ಪಿದ್ದರಂತೆ. ಇದೀಗ ಒಂದು ಸಿನಿಮಾ ರಿಲೀಸ್​ಗೆ ರೆಡಿಯಿದೆ. "ಇವೆರಡು ಚಿತ್ರಗಳು ಅಪ್ಪು ಅವರಿದ್ದಾಗಲೇ ಫೈನಲ್​ ಆಗಿತ್ತು. "ಓ2' ಮೆಡಿಕಲ್​ ಥ್ರಿಲ್ಲರ್​ ಕಥೆಯಾಗಿದ್ದು ಆಶಿಕಾ ರಂಗನಾಥ್​ ನಟಿಸಿದ್ದಾರೆ. ಸದ್ಯ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಎರಡು& ಮೂರು ತಿಂಗಳಲ್ಲಿ ರಿಲೀಸ್​ ಆಗಲಿದೆ' ಎಂದು ಹೇಳಿಕೊಳ್ಳುತ್ತಾರೆ ಅಶ್ವಿನಿ.

ಚಿತ್ರಗಳ ಆಯ್ಕೆ ಹೇಗೆ?
ಅಶ್ವಿನಿಗೆ ಥ್ರಿಲ್ಲರ್​ ಜಾನರ್​ ಇಷ್ಟವಂತೆ. ಕಥೆ ಆಯ್ಕೆ ಮಾಡಿಕೊಳ್ಳುವ ಬಗ್ಗೆ, "ವಿಷಯ ಏನಿದೆ? ಮೇಕಿಂಗ್​ ಹೇಗಿರಲಿದೆ? ಪ್ರೇಕ್ಷಕರಿಗೆ ಕನೆಕ್ಟ್​ ಆಗುತ್ತಾ? ಎಂಬ ಮೂರು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಿಕೊಳ್ಳುತ್ತೇನೆ. ನಂತರ ನಮ್ಮ ಜತೆಗಿರುವ ಮೂವರು ನಿರ್ದೇಶಕರಿಗೆ ಕಥೆ ನೀಡುತ್ತೇನೆ. ಅವರು ಓಕೆ ಅಂದಾಗ ಸಿನಿಮಾ ಪ್ರಾರಂಭಿಸುತ್ತೇವೆ. ಹೀಗಾಗಿಯೇ ಇಲ್ಲಿಯವರೆಗೂ ಕಮರ್ಷಿಯಲ್ಲಾಗಿ ಎಲ್ಲ ಚಿತ್ರಗಳೂ ಕೈಹಿಡಿದಿವೆ. ಈ ವರ್ಷದಂತೆಯೇ ಮುಂದೆಯೂ ವರ್ಷಕ್ಕೆರಡು ಚಿತ್ರಗಳನ್ನು ಮಾಡಬೇಕು ಅಂತಂದುಕೊಂಡಿದ್ದೇನೆ' ಎನ್ನುತ್ತಾರೆ. ಸದ್ಯ ಇನ್ನೊಂದು ಸಿನಿಮಾ ಮಾತುಕತೆ ನಡೆಯುತ್ತಿದೆ.

ಪರಭಾಷಾ ಸಿನಿಮಾ ನಿರ್ಮಾಣ
ಪರಭಾಷೆಗಳಲ್ಲಿ ಸಿನಿಮಾ ನಿರ್ಮಿಸುವ ಬಗ್ಗೆ ಅಶ್ವಿನಿ, "ಬೇರೆ ಭಾಷೆಗಳಿಂದ ಸಿನಿಮಾ ಮಾಡಿ ಅಂತ ಯಾರೂ ಬಂದಿಲ್ಲ. ನಮ್ಮ ಕುಟುಂಬದಲ್ಲಿ ಅಪ್ಪಾಜಿ, ಅಮ್ಮ, ಅಪು$್ಪ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡಿಲ್ಲ. ಮುಂದೆ ಉತ್ತಮ ಕಥೆಗಳು, ದೊಡ್ಡ ಬ್ಯಾನರ್​ಗಳು ಸಹ ನಿರ್ಮಾಣಕ್ಕೆ ಬಂದರೆ, ಕೈಜೋಡಿಸುವ ಬಗ್ಗೆ ಯೋಚಿಸುತ್ತೇವೆ' ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net