5000 ಮಂದಿ ಅಪ್ಪು ಅಭಿಮಾನಿಗಳಿಗೆ ಬಿರಿಯಾನಿ ತಯಾರಿ ಆಗಿದ್ದು ಇಲ್ಲೇ ನೋಡಿ...

1253770
Published on
ಬೆಂಗಳೂರು: ಕರುನಾಡ ರತ್ನ ನಟ ಡಾ. ಪುನೀತ್​ ರಾಜ್​ಕುಮಾರ್​ ಅವರ ಅಕಾಲಿಕ ಅಗಲಿಕೆಯನ್ನು ಇಂದಿಗೂ, ಒಬ್ಬರಿಗೂ ಸತ್ಯ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಇನ್ನು, ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಪ್ಪು ಅವರನ್ನು ನೆನೆದು ಪ್ರತಿದಿನ ಕಂಬನಿ ಮಿಡಿಯುತ್ತಿದ್ದಾರೆ. ನಟ ಪುನೀತ್ ಅವರ ಮೇಲಿನ ಅಭಿಮಾನವನ್ನು ತೋರಿಸಲು ಯಾವ ಯಾವ ರೀತಿಯಲ್ಲಿ ಸಾಧ್ಯವಾಗುತ್ತೋ ಆ ಎಲ್ಲಾ ರೀತಿಗಳಲ್ಲಿ ಪುನೀತ್​ಗೆ ವಿಶೇಷ ಗೌರವವನ್ನು ತೋರಿಸುತ್ತಿದ್ದಾರೆ. ಅದರಲ್ಲಿಯೂ, ಮಾರ್ಚ್ 17 ರಂದು ನಟ ಪುನೀತ್ ಅವರು ಹುಟ್ಟ ಹಬ್ಬವಾಗಿದ್ದು, ಅಂದೇ ಪುನೀತ್ ಅವರು ಕೊನೆಯ ಬಾರಿ ಹೀರೋ ಆಗಿ ಕಾಣಿಸಿಕೊಂಡ ಸಿನಿಮಾ 'ಜೇಮ್ಸ್' ಚಿತ್ರ ತೆರೆಗಪ್ಪಳಿಸಿತು.
ನಟ ಪುನೀತ್​ ಇಲ್ಲದ ಮೊದಲ ಬರ್ತಡೇ ಇದಾಗಿದ್ದು, ಎಲ್ಲಡೆ ಪುನೀತ್​ ಅವರನ್ನು ನೆನೆದು ಜನ ಕಂಬನಿ ಮಿಡಿಯುತ್ತಿದ್ದರು. ಇನ್ನು, ಚಿತ್ರ ನೋಡಿ ಬಂದ ಅಭಿಮಾನಿಗಳು ಸಹ ಕಣ್ಣೀರು ಸುರಿಸಿದ್ದಾರೆ. ಜತೆಗೆ, ನಟ ಪುನೀತ್ ಅವರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ನೇತ್ರದಾನ, ರಕ್ತದಾನ, ಅಂಗ ದಾನ, ಅನ್ನ ದಾನ, ಗಿಡಗಳನ್ನು ನೆಟ್ಟುವ ಕಾರ್ಯಕ್ರಮದ ಜತೆಗೆ ಪಲ್ಲಕಿ ಮೆರವಣಿಗೆ ಅಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಹೀಗೆ, ಅನ್ನದಾನ ಕಾರ್ಯಕ್ರಮಗಳಂತೂ ಮೂರು ದಿನಗಳ ಬಳಿಕವೂ ಅಂದರೆ ಮಾರ್ಚ್ 20 ರಂದು ಜೋರಾಗಿಯೇ ನಡೆದವು.
ಭಾನುವಾರ ಎಂದ ತಕ್ಷಣ ಬಿರಿಯಾನಿ ನೆನಪಾಗುವುದು ಸಹಜ. ಹಾಗಾಗಿ, ವಿರೇಶ್ ಚಿತ್ರಮಂದಿರದ ಬಳಿ 'ಅಪ್ಪು ಯುತ್ ಬ್ರಿಗೆಡ್' ವತಿಯಿಂದ 'ರಾಜ್ ಬಿರಿಯಾನಿ ಹೋಟೆಲ್''​ನಲ್ಲಿ ಹೆಚ್ಚು ಕಡಿಮೆ 5000 ಮಂದಿ ಅಪ್ಪು ಅಭಿಮಾನಿಗಳಿಗೆ ಅಂತ ಚಿಕ್ಕನ್ ಬಿರಿಯಾನಿ ತಯಾರಿ ಆಗಿದ್ದು, ಆ ಬಿರಿಯಾನಿ ಸವಿದ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಹಾಗಾದರೆ, ಚಿಕ್ಕನ್ ಬಿರಿಯಾನಿಯ ತಯಾರಿ ಮತ್ತು ಬಿರಿಯಾನಿ ಸವಿದ ಅಭಿಮಾನಿಗಳ ರಿಯಾಕ್ಷನ್ ಹೇಗಿತ್ತು ಎಂದು ತಿಳಿಯಲು ಈ ಮೇಲಿನ ವಿಡಿಯೋ ತಪ್ಪದೇ ನೋಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net