More

    ಮತ್ತೆ ಮುನ್ನೆಲೆಗೆ ಬಂದ ಭಾರತ ಕ್ರಿಕೆಟಿಗನ ಲವ್ ಸ್ಟೋರಿ! ಊರ್ವಶಿ-ರಿಷಭ್ ರಿಲೇಶನ್​ಶಿಪ್ ನಿಜವೇ?

    ಮುಂಬೈ: ಬಾಲಿವುಡ್​ ನಟರಿಗೂ ಹಾಗೂ ಕ್ರಿಕೆಟ್ ಲೋಕಕ್ಕೂ ಇರುವ ನಂಟು ಇಂದಿನದ್ದು ಅಲ್ಲ. ಈಗಾಗಲೇ, ಹಲವು ಕ್ರಿಕೆಟಿಗರು ಬಾಲಿವುಡ್ ನಟಿಯರ ಜತೆ ಡೇಟಿಂಗ್ ಮಾಡಿದ್ದು, ಕೆಲವರು ಡೇಟ್ ಮಾಡಿದ ಆ ನಟಿಯರನ್ನು ಮದುವೆ ಸಹ ಆಗಿದ್ದಾರೆ. ಇನ್ನೂ, ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಊರ್ವಶಿ ರೌಟೇಲಾ ಅವರನ್ನು ಕುರಿತು ಒಂದು ಹೊಸ ಕಥೆ ಕೇಳಿಬರುತ್ತಿದೆ. ಹೌದು, ನಟಿ ಊರ್ವಶಿ ಅವರ ಭೇಟಿಗಾಗಿ ಭಾರತ ದೇಶ ತಂಡದ ಖ್ಯಾತ ಕ್ರಿಕೆಟಿಗ ಒಬ್ಬರು ಬರೋಬ್ಬರಿ 17 ಗಂಟೆ ಕಾದು ಕುಳಿತ್ತಿದ್ದರಂತೆ. ಅಂದಹಾಗೆ , ಆ ಕ್ರಿಕೆಟಿಗ ಯಾರು ಅಂತೀರಾ…? ಅವರೇ ರಿಷಭ್​ ಪಂತ್. ನಟಿ ಊರ್ವಶಿಗಾಗಿ ಬರೋಬ್ಬರಿ 17 ಗಂಟೆ ಕಾದಿದ್ದರಂತೆ ರಿಷಭ್. ಇನ್ನು, ಆ ಬಳಿಕ ಈ ಇಬ್ಬರೂ ರಿಲೇಶನ್​ಶಿಪ್​ನಲ್ಲಿದ್ದರು ಎನ್ನುವ ವಿಚಾರ ಕೂಡಾ ಕೇಳಿಬಂದಿತ್ತು. ಕೆಲವರು ಇದು ನಿಜ ಎಂದರೆ, ಇನ್ನೂ ಕೆಲವರು ವದಂತಿ ಎಂದು ಹೇಳುತ್ತಿದ್ದರು.
    ಅಂದಹಾಗೆ, 2013 ರಲ್ಲಿ ತೆರೆಗೆ ಬಂದ ‘ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ ನಟಿ ಊರ್ವಶಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು, 2015 ರಲ್ಲಿ ಕನ್ನಡದಲ್ಲಿ ತೆರೆಗೆ ಬಂದ ‘ಮಿಸ್ಟರ್​ ಐರಾವತ’ ಸಿನಿಮಾದ ಮೂಲಕ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. 2019 ರಲ್ಲಿ ನಟಿ ಊರ್ವಶಿ ಅವರು ಶೂಟಿಂಗ್​ಗಾಗಿ ವಾರಾಣಸಿಗೆ ಹೋಗಿದ್ದಾಗ ಅವರು ಬ್ಯೂಸಿ ಇರುವ ಕಾರಣ ಯಾರಿಗೂ ಭೇಟಿ ಮಾಡೋಕೆ ಅವಕಾಶ ನೀಡಬೇಡಿ ಎಂದು ಕೆಲಸಗಾರರಿಗೆ ಹೇಳಿದ್ದರಂತೆ. ಅದೇ ಸಮಯದಲ್ಲಿ, ರಿಷಭ್ ಪಂತ್ ಕೂಡಾ ವಾರಾಣಸಿಯಲ್ಲೇ ಇದ್ದ ಕಾರಣ ಊರ್ವಶಿ ಅವರನ್ನು ಭೇಟಿ ಮಾಡೋಕೆ ಅವರು ತೆರಳಿದ್ದರಂತೆ. ಆದರೆ, ಇದಕ್ಕೆ ಅವಕಾಶ ಸಿಗಲಿಲ್ಲ. ಹೀಗಿದ್ದರೂ, ಹಲವು ವರದಿಗಳ ಪ್ರಕಾರ ನಟಿಯನ್ನು ಭೇಟಿ ಮಾಡೋಕೆ 17 ಗಂಟೆಗಳ ಕಾಲ ಕಾದ ನಂತರ ಊರ್ವಶಿ ಅವರನ್ನು ಭೇಟಿ ಮಾಡಿಯೇ ಮರಳಿದ್ದರಂತೆ ರಿಷಭ್ ಪಂತ್. ಆದರೆ, ಈ ಇಬ್ಬರೂ ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರೂ, ಸದ್ಯ ಇವರಿಬ್ಬರ ನಡುವೆ ಯಾವ ಸಂಬಂಧವಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿವೆ.

    ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಟಿ ತೇಜಸ್ವಿನಿ ಪ್ರಕಾಶ್‌: ಬಾಲ್ಯದ ಗೆಳೆಯನೊಡನೆ ವಿವಾಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts